ಹಿರಿಯ ಟೈಲರ್ ನಿಧನ

ಮುಳ್ಳೇರಿಯ: ಮುಳ್ಳೇರಿಯದ ಬಟ್ಟೆ ಅಂಗಡಿಯಲ್ಲಿ ಹಲವು ವರ್ಷಗಳ ಕಾಲ ಟೈಲರ್ ಆಗಿದ್ದ ತೆಕ್ಕೇಕರೆ ನಿವಾಸಿ ಸುಬ್ಬ ಪಾಟಾಳಿ ಯಾನೆ ಸುಭಾಷ್ (76) ನಿಧನ ಹೊಂದಿದರು. ಇತ್ತೀಚೆಗಿನಿಂದ ಕಾರಡ್ಕ ಗಾಂಧಿನಗರ ದಲ್ಲಿ ಟೈಲರ್ ಅಂಗಡಿ ನಡೆಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಸ್ಕೂಟರ್ ಅಪಘಾತ ಸಂಭವಿಸಿ  ಚಿಕಿತ್ಸೆಯಲ್ಲಿದ್ದರು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ.

ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಸಂತೆಷ್, ಗಿರೀಶ್, ಬಿಂದು, ಸೊಸೆ ಮೇಘ, ಅಳಿಯ ರಘುನಾಥ್ ಅಡ್ಕಸ್ಥಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಸಹೋದರರಾದ ಕೊರಗ ಪಾಟಾಳಿ, ಬಾಬು, ಸಹೋದರಿಯರಾದ ಪಾಟಿ, ಅಮ್ಮಿಣಿ ಈ ಹಿಂದೆ ನಿಧನ ಹೊಂದಿದ್ದಾರೆ.

You cannot copy contents of this page