ಕುಂಬಳೆ: ಕೊಡ್ಯಮ್ಮೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಭಾಗವಾಗಿರುವ ಯುಪಿ ಶಾಲೆಯಲ್ಲಿ ಸಮಾಜದ್ರೋಹಿಗಳು ಅಟ್ಟಹಾಸ ಮೆರೆದಿದ್ದಾರೆ. ಶಾಲೆಯ ಕಿಟಿಕಿ ಗಾಜು ಗಳನ್ನು ಕಲ್ಲೆಸೆದು ಪುಡಿಗೈಯ್ಯಲಾಗಿದೆ. ಯು.ಪಿ ವಿಭಾಗ ತರಗತಿ ಕೊಠಡಿಗಳ ಕಿಟಿಕಿ ಗಾಜುಗಳನ್ನು ಸಮಾಜದ್ರೋ ಹಿಗಳು ಹಾನಿಗೊಳಿಸಿದ್ದು ಅಲ್ಲದೆ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಹಳೆಯ ವಸ್ತುಗಳನ್ನು ನಾಶಗೊಳಿಸಿದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದೆ. ಮೊನ್ನೆ ರಾತ್ರಿ ಸಮಾಜದ್ರೋಹಿಗಳು ಈ ಕೃತ್ಯವೆಸಗಿದ್ದಾರೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಮುಖ್ಯೋಪಾಧ್ಯಾಯ ಪ್ರದೀಪ್, ಪಿಟಿಎ ಅಧ್ಯಕ್ಷ ಅಬ್ಬಾಸ್ ಅಲಿ ಕೊಡ್ಯಮ್ಮೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಶಾಲೆ ಪರಿಸರದಲ್ಲಿ ರಾತ್ರಿ ಹೊತ್ತಿನಲ್ಲಿ ಸಮಾ ಜದ್ರೋಹಿಗಳು ತಂಗುತ್ತಿದ್ದಾರೆಂದೂ ನಾಗರಿಕರು ಆರೋಪಿಸಿದ್ದಾರೆ.






