ಯುವತಿಯ ಮೃತದೇಹ ಮನೆಯಲ್ಲಿ ಪತ್ತೆ:  ಗೆಳೆಯ ಕಸ್ಟಡಿಯಲ್ಲಿ

ಪತ್ತನಂತಿಟ್ಟ: ಯುವತಿ ಮನೆಯೊ ಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾಳೆ. ಅಡೂರು ಕೋಟಮುಗಲ್ ನಿವಾಸಿ ಶೆಹನ (31) ಮೃತಪಟ್ಟ ಯುವತಿ. ಈಕೆ ಆತ್ಮಹತ್ಯೆ ನಡೆಸುವ ವೇಳೆ ಮನೆಯಲ್ಲಿ ಈಕೆಯ ಗೆಳೆಯ ಏಳಾಂಕುಳಂ ನಿವಾಸಿಯೋರ್ವ ನಿದ್ದು, ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಪತಿಯೊಂದಿಗೆ ವಿರಸಗೊಂಡು ಏಕಾಂಗಿಯಾಗಿ ಯುವತಿ ವಾಸವಾಗಿದ್ದಳು. ನಿನ್ನೆ ರಾತ್ರಿ 7 ಗಂಟೆಗೆ ಘಟನೆ ನಡೆದಿದೆ. ಶೆಹನಳ ಮನೆಯಿಂದ ಬೊಬ್ಬೆ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೌನ್ಸಿಲರ್‌ಗೆ ಮಾಹಿತಿ ತಿಳಿಸಿದ್ದು, ಅವರು ಮನೆಗೆ ಬಂದು ನೋಡಿದಾಗ ಬಾಗಿಲನ್ನು ಒಳಗಿನಿಂದಿ ಮುಚ್ಚಲಾಗಿತ್ತು. ಗೆಳೆಯನಲ್ಲಿ ಬಾಗಿಲು ತೆರೆಯಲು ಹೇಳಿದ್ದು ಒಳ ಹೋಗಿ ನೋಡಿದಾಗ ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅಲ್ಲದೆ ಇವರಿಬ್ಬರ ದೇಹದಲ್ಲೂ ರಕ್ತದ ಕಲೆಗಳನ್ನು ಪತ್ತೆಹಚ್ಚಲಾಗಿದೆ.  ಘಟನೆಯಲ್ಲಿ ನಿಗೂಢತೆಯಿದ್ದು, ತನಿಖೆಯಿಂದ ನಿಜ ವಿಷಯ ಬಹಿರಂಗಗೊಳ್ಳಲಿದೆ.

You cannot copy contents of this page