ಬಿಜೆಪಿ ಕಾರ್ಯಕರ್ತ, ರೇಶನ್ ಅಂಗಡಿ ಮಾಲಕ ನಿಧನ

ಕುಂಬ್ಡಾಜೆ:  ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಮಾರ್ಪನಡ್ಕ  ಜಯನಗರದಲ್ಲಿರುವ ರೇಶನ್ ಅಂಗಡಿ ಮಾಲಕನೂ ಆದ  ಗುಲುಗುಂಜಿ ನಿವಾಸಿ   ಅಶೋಕ್ ಭಟ್  (52) ನಿಧನ ಹೊಂ ದಿದರು. ಅಸೌಖ್ಯ ನಿಮಿತ್ತ ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ನಿಧನ ಸಂಭವಿಸಿದೆ.

ಕುಂಬ್ಡಾಜೆ ಪಂಚಾಯತ್‌ನಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ನಾಗಿದ್ದ ಇವರು ಸಮಾಜಸೇವಕನೂ ಆಗಿದ್ದರು. 1992 ರಲ್ಲಿ ನಡೆದ ಅಯೋಧ್ಯೆ ಕರಸೇವೆಯಲ್ಲಿ ಇವರು ಪಾಲ್ಗೊಂಡಿದ್ದರು. ಮೃತದೇಹವನ್ನು ನಿನ್ನೆ ಸಂಜೆ ಮಾರ್ಪನಡ್ಕದಲ್ಲಿರುವ  ಕುಂಬ್ಡಾಜೆ ಪಂಚಾಯತ್ ಕಚೇರಿ ಮುಂದೆ ಸಾರ್ವಜನಿಕ ದರ್ಶನಕ್ಕಿರಿ ಸಿದ್ದು ಪಕ್ಷದ ನೇತಾರರ ಸಹಿತ ಹಲವರು ತಲುಪಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಗುಲುಗುಂಜಿಯ ಲ್ಲಿರುವ ಮನೆ ಹಿತ್ತಿಲಲ್ಲಿ ಅಂತ್ಯಸಂ ಸ್ಕಾರ ನಡೆಸಲಾಯಿತು.

ದಿವಂಗತರಾದ ಗೋಪಾಲಕೃಷ್ಣ ಭಟ್-ರತ್ನಾವತಿ ದಂಪತಿಯ ಪುತ್ರನಾದ ಮೃತರು ಸಹೋದರರಾದ ಮಾಧವ ಭಟ್, ರವಿಚಂದ್ರ, ವೆಂಕಟ್ರಮಣ, ಸೂರ್ಯನಾರಾಯಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page