ಕಣ್ಣೂರು: ಕಾಸರಗೋಡು ನಿವಾಸಿಯ ಬಗ್ಗೆ ಮಾಹಿತಿ ಕೇಳಿ ತಲುಪಿದ ವ್ಯಕ್ತಿ ಸಿಪಿಎಂ ನೇತಾರನ ಸಹೋದರಿಯ ಕುತ್ತಿಗೆಯಿಂದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗಿದ್ದಾನೆ. ತಳಿಪರಂಬ್ ಪೂಮಂಗಲತ್ ಎಂಬಲ್ಲಿ ಘಟನೆ ನಡೆದಿದೆ. ಸಿಪಿಎಂ ತಳಿಪರಂಬ್ ಏರಿಯಾ ಸಮಿತಿ ಸದಸ್ಯ ಕೆ. ನಾರಾಯಣನ್ರ ಹಿರಿಯ ಸಹೋದರಿ ಪಾವಳತ್ ಕೋಳಿಯನ್ ಕಲ್ಯಾಣಿ (೮೦)ರ ಚಿನ್ನದ ಸರವನ್ನು ಅಪಹರಿಸಲಾಗಿದೆ.
೨೭ ವರ್ಷದಿಂದ ಇವರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಇವರ ಮನೆಯ ಸಮೀಪದಲ್ಲೇ ಕಾಸರಗೋಡು ನಿವಾಸಿಗಳಾದ ದಂಪತಿ ವಾಸ ಮಾಡುತ್ತಿದ್ದಾರೆ. ಇವರ ಬಗ್ಗೆ ಮಾಹಿತಿ ಕೇಳಿ ತಲುಪಿದ ವ್ಯಕ್ತಿ ಮಾಸ್ಕ್ ಧರಿಸಿದ್ದು, ಕುಡಿಯಲು ನೀರು ಕೇಳಿದ್ದಾನೆ. ನೀರು ತರಲೆಂದು ಒಳಗೆ ಹೋದ ಕಲ್ಯಾಣಿ ಹಿಂತಿರುಗಿ ಬರುವಾಗ ಕುತ್ತಿಗೆಯಿಂದ ಸರವನ್ನು ಅಪಹರಿಸಿ ಪರಾರಿಯಾಗಿದ್ದಾನೆ. ಕಲ್ಯಾಣಿ ಬೊಬ್ಬೆ ಹೊಡೆದಾಗ ನೆರೆಮನೆಯವರು ತಲುಪಿದರಾದರೂ ಈ ವೇಳೆ ಅಕ್ರಮಿ ಪರಾರಿಯಾಗಿದ್ದನು. ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.







