ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಉಪ್ಪಳ: ಬೈಕ್‌ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ಸಹಿತ ಓರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.  ಪೈವಳಿಕೆ ಗ್ರಾಮದ ಬಾಯಿಕಟ್ಟೆ  ಜೆ.ಪಿ ನಿಲಯದ  ಜಯರಾಮ ಬಿ (53) ಬಂಧಿತ ವ್ಯಕ್ತಿ. ಈತನ ಕೈಯಿಂದ ೩.೪೨ ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ.  ಈ ತಿಂಗಳ ೧೪ರಂದು  ರಾತ್ರಿ 7.30ಕ್ಕೆ ಬಾಯಿಕಟ್ಟೆಯಲ್ಲಿ ಕುಂಬಳೆ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ  ಜಯರಾಮ ಬೈಕ್‌ನಲ್ಲಿ ಮದ್ಯವನ್ನು ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದನೆನ್ನಲಾಗಿದೆ.

ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಎ.ಬಿ. ಅಬ್ದುಲ್ಲ, ಸಿವಿಲ್ ಎಕ್ಸೈಸ್  ಆಫೀಸರ್‌ಗಳಾದ ದಿನೂಪ್ ಕೆ, ಕಣ್ಣನ್ ಕುಂಞಿ ಟಿ, ಅಖಿಲೇಶ್ ಎಂ.ಎಂ ಎಂಬಿವರಿದ್ದರು.

You cannot copy contents of this page