ಯುವತಿ ಕ್ಷೇತ್ರ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ತನಿಖೆ ಆರಂಭ

ಕುಂಬಳೆ: ಮುಜುಂಗಾವು  ಕ್ಷೇತ್ರದ ಕೆರೆಯಲ್ಲಿ  ಯುವತಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ತನಿಖೆ ತೀವ್ರಗೊಳಿಸಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಸೀತಾಂಗೋಳಿ ಎಡನಾಡು ಬ್ಯಾಂಕ್ ಸಮೀಪದ ರಾಮಕೃಷ್ಣ ಎಂಬವರ ಪತ್ನಿ ಎಂ. ಸುನಿತ (48) ಮುಜುಂಗಾವು ಶ್ರೀ ಪಾರ್ಥಸಾರಥಿ ಕ್ಷೇತ್ರದ ಕೆರೆಯಲ್ಲಿ ನಿನ್ನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುನಿತ ಮೊನ್ನೆ ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದರು. ನಿನ್ನೆ ಬೆಳಿಗ್ಗೆ ಪತಿ ಎದ್ದು ನೋಡಿದಾಗ ಸುನಿತ ಮನೆಯಲ್ಲಿ ರಲಿಲ್ಲ. ಪರಿಸರ ಪ್ರದೇಶಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸುತ್ತಿರುವಂತೆ ನಿನ್ನೆ ಸಂಜೆ 4 ಗಂಟೆ ವೇಳೆ ಕ್ಷೇತ್ರದ ಕೆರೆಯಲ್ಲಿ ಸುನಿತರ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ತಲುಪಿದ   ಎಸ್‌ಐ ಕೆ.ಪಿ. ಗಣೇಶನ್, ಕಾಸರಗೋಡು ಅಗ್ನಿಶಾಮಕದಳದ ಲೀಡಿಂಗ್ ಫಯರ್‌ಮ್ಯಾನ್ ಆಂಡ್ ರೆಸ್ಕ್ಯೂ ಆಫೀಸರ್‌ಗಳಾದ ಸುಕು, ಪ್ರಸೀತ್, ಪಯರ್‌ಮೇನ್‌ಗಳಾದ ಮುಹಮ್ಮದ್ ಸಿರಾಜ್, ಅಮಲ್ ರಾಜ್, ಶ್ರೀಜಿಶ ಎಂಬಿವರ ನೇತೃತ್ವದಲ್ಲಿ ಮೃತದೇಹ ವನ್ನು ಕೆರೆಯಿಂದ ಮೇಲಕ್ಕೆತ್ತಲಾ ಯಿತು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಇಂದು ಮರಣೋ ತ್ತರ ನಡೆಸಲಾಗುವುದು.  ಸುನಿತ ಹಾಗೂ ಪತಿ ರಾಮಕೃಷ್ಣ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪುತ್ರ ಧನುಷ್ ಕುಮಾರ್ ಬೆಂಗಳೂರಿನಲ್ಲಿ ಐ.ಟಿ ನೌಕರನಾಗಿದ್ದಾರೆ.

You cannot copy contents of this page