ಕಣ್ಣೂರು: ಅಂಜರಕಂಡಿ ಮೆಡಿಕಲ್ ಕಾಲೇಜಿನಲ್ಲಿ ದಂತ ವಿದ್ಯಾರ್ಥಿಯಾಗಿದ್ದ ನಿತಿನ್‌ರಾಜ್ ಆತ್ಮಹತ್ಯೆಗೈದ ಪ್ರಕರಣದಲ್ಲಿನ ಪ್ರಧಾನ ಆರೋಪಿಯಾದ ಡಾ. ಎಂ.ಕೆ. ರಾಮ್ ಸೆರೆಯಾಗಿದ್ದಾನೆ. ಕೊಡಗಿನ ರಹಸ್ಯ ಕೇಂದ್ರದಿಂದ ಈತನನ್ನು ಬಂಧಿಸ ಲಾಗಿದೆ. ಕ್ರೈಮ್ ಬ್ರಾಂಚ್ ತಂಡ ಡಾ| ರಾಮ್‌ನನ್ನು ಸೆರೆ ಹಿಡಿದಿದ್ದು ಕಣ್ಣೂರಿಗೆ ತಲುಪಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕ್ರೈಮ್ ಬ್ರಾಂಚ್ ತಂಡ ತಲುಪಿದ ಮಾಹಿತಿ ಲಭಿಸಿದ ಕೂಡಲೇ ಪಾರಾಗಲು ಯತ್ನಿಸಿದ ಆರೋಪಿ ಯನ್ನು ಸಾಹಸಿಕವಾಗಿ ಸೆರೆ ಹಿಡಿಯಲಾಗಿದೆ. ಡಾಕ್ಟರ್ ಆಂಧ್ರ ಪ್ರದೇಶದ ರಹಸ್ಯ ಕೇಂದ್ರದಲ್ಲಿರುವುದಾಗಿ ಕ್ರೈಮ್ ಬ್ರಾಂಚ್‌ಗೆ ಈ ಮೊದಲು ಮಾಹಿತಿ ಲಭಿಸಿತ್ತು. ಅದರಂತೆ ತನಿಖಾ ತಂಡ ಆಂಧ್ರಕ್ಕೆ ತಲುಪಿತ್ತಿ. ಆದರೆ ಅದರ ಮುಂಚಿತ ಡಾಕ್ಟರ್ ಅಲ್ಲಿಂದ ಪಾರಾಗಿದ್ದನು. ಬಳಿಕ ಕೊಡಗಿಗೆ ತಲುಪಿರುವುದಾಗಿ ಕ್ರೈಮ್ ಬ್ರಾಂಚ್‌ಗೆ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ತಂಡ ಅಲ್ಲಿಗೆ ತಲುಪಿ ಸೆರೆ ಹಿಡಿದಿದೆ.







