ವಿಕಲಚೇತನ ಬಾಲಕಿಗೆ ಕಿರುಕುಳ:ಇನ್ನೋರ್ವ ಆರೋಪಿ ಸೆರೆ

ಕಾಸರಗೋಡು: ಪ್ರಾಯಪೂರ್ತಿ ಯಾಗದ ವಿಕಲಚೇತನಳಾದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಇನೋರ್ವ ಸೆರೆಗೀಡಾಗಿದ್ದಾನೆ. ಪಾಕಂ ಚೇರ್ಕಪ್ಪಾರ ಅಂಜಿಲ್ಲತ್ ನಿವಾಸಿ ಎ.ಜಿ. ಶಾಹಿದ್ (35) ಎಂಬಾ ತನನ್ನು ಬೇಕಲ ಪೊಲೀಸರು ಬಂಧಿಸಿ ದ್ದಾರೆ.ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಶಾಹಿದ್ ಸೆರೆಗೀಡಾಗುವು ದರೊಂದಿಗೆ  ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬೇಕಲ ಪೊಲೀಸರು  ಸೆರೆ ಹಿಡಿದ ಆರೋಪಿಗಳ ಸಂಖ್ಯೆ ೫ಕ್ಕೇರಿದೆ.  ೧೬ರ ಹರೆಯದ ಬಾಲಕ ಸಹಿತ  ಮೂರು ಮಂದಿಯನ್ನು ಇತ್ತೀಚೆಗೆ  ಬಂಧಿಸಲಾಗಿತ್ತು.  ಕೋಟಿಕುಳಂ ರೈಲ್ವೇ ನಿಲ್ದಾಣ ಸಮೀಪದ ಸಾಲಿ ಯಾನೆ  ಮುಹಮ್ಮದ್ ಸಾಲಿಹ್ (29), ಪೆರುಂಬಳ ಕೋಳಿಯಡ್ಕದ ಶೆರೀಫ್ ಕಡಪ್ಪಳಂ (40), ಮೈಲಾಟಿ  ಕುಟ್ಟಪ್ಪುನ್ನ ಕುರುಕ್ಕನ್‌ಕುನ್ನು ನಿವಾಸಿಯೂ, ತಚ್ಚಂಗಾಡ್‌ನಲ್ಲಿ ವಾಸಿಸುವ  ಎ.ಟಿ. ಮುಹಮ್ಮದ್ ನೌಶಾದ್ (39) ಹಾಗೂ 16ರ ಹರೆಯದ ಓರ್ವ ಬಾಲಕ ಈ ಮೊದಲು ಸೆರೆಗೀಡಾಗಿದ್ದಾರೆ.  ವಿಕಲಚೇತನಳಾದ ಬಾಲಕಿಗೆ ಶಾಹಿದ್ ಹಲವು ಬಾರಿ ಫೋನ್‌ನಲ್ಲಿ ಸಂಪರ್ಕಿಸಿದ್ದನು. ಇದುವೇ ಈತನ ಕುರಿತು ಮಾಹಿತಿ ಲಭಿಸಲು ಸಹಾಯಕವಾಗಿದೆ.  ಬಾಲಕಿಗೆ ಕಿರುಕುಳ ನೀಡಿದ ಸಂಬಂಧ ಚೈಲ್ಡ್ ಲೈನ್ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಬೇಕಲ ಪೊಲೀಸರು ೫ ಪೋಕ್ಸೋ  ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

RELATED NEWS

You cannot copy contents of this page