ನ್ಯೂಜೆರ್ಸಿ: 2026 ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದು ಬೀಗಿದೆ. ಹೆಚ್ಚುವರಿ ಸಮಯದಲ್ಲಿ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು ಸ್ಪೇನ್ ತಂಡಕ್ಕೆ ಐತಿಹಾಸಿಕ ಗೆಲವುತಂದುಕೊಟ್ಟಿದೆ. ಆ ಮೂಲಕ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಅರ್ಜೆಂಟೀನಾ ವಿಫಲವಾಯಿತು. ಸ್ಪೇನ್ ಫಿಪಾ ವಿಶ್ವಕಪ್ ಗೆಲ್ಲುವುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಅಮೆರಿಕದ ನ್ಯೂಜೆರ್ಸಿ ನಗರದ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡವು ಸ್ಪೇನ್‌ನ ಬಲಿಷ್ಠ ರಕ್ಷಣಾ ಪಡೆಯನ್ನು ಭೇದಿಸಲು ವಿಫಲವಾಯಿತು. ನಿಯಮಿತ ಅವಧಿಯಲ್ಲಿ ಯಾವುದೇ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯದ ಆರಂಭದಿಂದಲೇ ಸ್ಪೇನ್ ಚೆಂಡಿನ ಮೇಲೆ ಬಿಗಿ ಹಿಡಿತ ಸಾಧಿಸಿ ಅರ್ಜೆಂಟೀನಾ ತಂಡವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿತು. ಅದರಿಂದ ಹೊರಬರಲು ಅರ್ಜೆಂಟಿನಾ ಗರಿಷ್ಠ ಪ್ರಯತ್ನ ನಡೆಸಿದರೂ ವಿಫಲಗೊಂಡಿತು. ಅರ್ಜೆಂಟೀನಾ ತನ್ನ ಅನುಭವಿ ನಾಯಕ ಮೆಸ್ಸಿಯ ಮೇಲೆ ಭಾರೀ ಭರವಸೆ ಇಟ್ಟಿದ್ದರೂ ಸ್ಪೇನ್‌ನ ಸಂಘಟಿತ ರಕ್ಷಣೆಯ ಎದುರು ನಿರೀಕ್ಷಿತ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಹೆಚ್ಚುವರಿ ಸಮಯದಲ್ಲಿ ಸ್ಪೇನ್ ಆಟಗಾರ ಫೆರಾನ್ ಟೊರೆಸ್ ಗೋಲ್ ಬಾರಿಸಿ ತನ್ನ ತಂಡಕ್ಕೆ ಗೆಲುವು ತಂದು ಕೊಡುವ ಮೂಲಕ 2026ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ್ನು ಸ್ಪೇನ್ ಗೆದ್ದು ಮುಂಡಿಗೇರಿಸುವುದರಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಆ ಮೂಲಕ ಸ್ಪೇನ್ 16 ವರ್ಷಗಳ ಬಳಿಕ ಅಂದರೆ 2010ರ ನಂತರ ಎರಡನೇ ಬಾರಿ ವಿಶ್ವಕಪ್ ಗೆದ್ದುಕೊಂಡಿತು. ಯೂರೋ ಕಪ್ ಗೆದ್ದ ಬಳಿಕ ವಿಶ್ವಕಪ್ ಕಪ್‌ನ್ನು ಗೆದ್ದ ಸ್ಪೇನ್ ಫುಟ್ಬಾಲ್‌ನಲ್ಲಿ ಮೊದಲ ಬಾರಿಗೆ ಹೊಸ ಅಧ್ಯಯ ಬರೆದಿದೆ.
ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ತಂಡದ ವಿರುದ್ಧ ಸೋತನಂತರ ಅರ್ಜೆಂಟೀನಾ ತಂಡದ ದಿಗ್ಗಜ ನಾಯಕ ಮೆಸ್ಸಿ ಮಗುವಿನಂತೆ ಕಣ್ಣೀರಿಟ್ಟರು. ತಮ್ಮ ವೃತ್ತಿ ಜೀವನದಲ್ಲಿ ಒಟ್ಟು ೩೪ ವಿಶ್ವಕಪ್ ಪಂದ್ಯಗಳನ್ನು ಆಡಿರುವ ಮೆಸ್ಸಿ ಒಟ್ಟು 21 ಗೋಲು ಗಳಿಸಿದ್ದಾರೆ. ಕ್ವೆಲಿಯನ್ ಎಂಬಾಪ್ಪೆಎರಡನೇ ಸಾಲಿನಲ್ಲಿದ್ದಾರೆ. ಇಂದು ಮುಂಜಾನೆ ಕೊನೆಗೊಂಡ ಫೈನಲ್ ಮೂಲಕ 39 ದಿನಗಳ ವಿಶ್ವದ ಮಹಾ ಕ್ರೀಡೋತ್ಸವಾದ ಫಿಫಾ ಫುಟ್ಬಾಲ್-2026ಗೆ ಅದ್ಧೂರಿಯ ತೆರೆ ಕಂಡಿತು.







