ಮೊಗ್ರಾಲ್‌ಪುತ್ತೂರು ನಿವಾಸಿ ಮುಂಬೈಯಲ್ಲಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಮೊಗ್ರಾಲ್ ಪುತ್ತೂರು ಕೋಟಕ್ಕುನ್ನು ದೇಶಾಂಕುಳದ ಅಬ್ದುಲ್ ಗಫೂರ್ (54) ಮುಂಬೈಯ ವಾಸಸ್ಥಳದಲ್ಲಿ ಕುಸಿದುಬಿದ್ದು ಮೃತಪಟ್ಟರು. ನಿನ್ನೆ ಮುಂಜಾನೆ ಕುಸಿದುಬಿದ್ದ ಇವರನ್ನು ಮುಂಬೈ-ಕೇರಳ ಮುಸ್ಲಿಂ ಜಮಾಅತ್ ಪದಾಧಿಕಾರಿಗಳ ನೇತೃತ್ವದಲ್ಲಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಹಲವು ವರ್ಷಗಳ ಕಾಲ ಅನಿವಾಸಿ ಯಾಗಿದ್ದ ಅಬ್ದುಲ್ ಗಫೂರ್ ಎರಡು ವರ್ಷಗಳಿಂದ ಮುಂಬೈ ಕೇಂದ್ರೀಕರಿಸಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೆ  ಸಾಮಾಜಿಕ ಚಟುವಟಿಕೆಗಳಲ್ಲೂ ನಿರತನಾಗಿದ್ದರು. ಮೃತದೇಹವನ್ನು ಇಂದು ಅಪರಾಹ್ನ ೩ ಗಂಟೆ ವೇಳೆ ಊರಿಗೆ ತಲುಪಿಸಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.

ಮೃತರು ಪತ್ನಿ ತಾಹರ, ಮಕ್ಕಳಾದ ಅಸ್ಕರ್, ಅಫ್ಸಿಯ, ಸಹೋದರ-ಸಹೋದರಿಯರಾದ ಮುಹಮ್ಮದ್, ಸಿದ್ದಿಕ್, ಅಶ್ರಫ್, ಜಲೀಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page