ಮಂಜೇಶ್ವರ: ಉದ್ಯಾವರ ಮಾಡದಲ್ಲಿರುವ ಶ್ರೀ ಅರಸುಕೃಪಾ ಜೈ ವೀರ ಮಾರುತಿ ವ್ಯಾಯಾಮ ಶಾಲೆಯಿಂದ ಕಾಣಿಕೆ ಹಣ ಕಳವಿಗೀ ಡಾದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿರುವಾಗಲೇ ಇನ್ನೊಂದು ಕಳವು ಬಗ್ಗೆ ದೂರು ನೀಡಲಾಗಿದೆ. ಉದ್ಯಾವರ ಮಾಡ ಶ್ರೀ ಭಗವತೀ ಭಂಡಾರಮನೆಯಿಂದ ಕಳವು ನಡೆದಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ಲಭಿಸಿದೆ. ಭಂಡಾರಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಸುಮಾರು 3000 ರೂಪಾಯಿಗಳ ವಿವಿಧ ವಸ್ತುಗಳನ್ನು ದೋಚಿರುವುದಾಗಿ ಭಂಡಾರಮನೆಯ ಪದಾಧಿಕಾರಿಗಳು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ತಿಂಗಳ ೧೬ರಂದು ಭಂಡಾರಮನೆಗೆ ಬಾಗಿಲು ಮುಚ್ಚಿಹೋದ ಪದಾಧಿಕಾರಿಗಳು ನಿನ್ನೆ ಬೆಳಿಗ್ಗೆ ಅಲ್ಲಿಗೆ ಮರಳಿ ನೋಡಿದಾಗ ಕಳವು ನಡೆದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಜಿಜೀಶ್ರ ನೇತೃತ್ವದಲ್ಲಿ ಪೊಲೀಸರು ಅಲ್ಲಿಗೆ ತಲುಪಿ ತಪಾಸಣೆ ನಡೆಸಿದ್ದಾರೆ. ಭಂಡಾರಮನೆಯ ಸಿಸಿ ಟಿವಿ ಕ್ಯಾಮರಾದಲ್ಲಿ ವ್ಯಕ್ತಿಯೋರ್ವನ ದೃಶ್ಯ ಕಂಡುಬಂದಿದ್ದು, ಇದು ಕಳವು ನಡೆಸಿದ ವ್ಯಕ್ತಿಯಾಗಿರಬಹುದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಈ ತಿಂಗಳ ೧೭ರಂದು ರಾತ್ರಿ ಉದ್ಯಾವರ ಮಾಡದ ವ್ಯಾಯಾಮ ಶಾಲೆಗೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳವು ನಡೆಸಿ ದ್ದರು. ಅಲ್ಲಿನ ಸಿಸಿ ಟಿವಿ ಕ್ಯಾಮರಾ ದಲ್ಲೂ ಕಳ್ಳನೆಂದು ಸಂಶಯಿಸುವ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.
ವ್ಯಾಯಾಮ ಶಾಲೆ ಹಾಗೂ ಭಂಡಾರ ಮನೆ ಕಳವು ಕೃತ್ಯದಲ್ಲಿ ಒಂದೇ ತಂಡ ಶಾಮೀಲಾಗಿರ ಬಹುದೇ ಎಂಬ ಸಂಶಯ ಮೂಡಿದೆ. ಇದರಿಂದ ಈ ಎರಡೂ ಕಡೆಗಳಲ್ಲಿ ಲಭಿಸಿದ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಲಾಗು ವುದೆಂದೂ, ಕಳ್ಳರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






