ಉಪ್ಪಳ: ಸೇವಾ ಭಾರತಿ ಮಂ ಗಲ್ಪಾಡಿ ಇದರ ತಿಂಗಳ ಸಭೆ ಐಲದಲ್ಲಿ ನಡೆಯಿತು. ಎರ್ನಾಕುಳಂನಲ್ಲಿ ನಡೆದ ರಾಜ್ಯ ಮಟ್ಟದ ಸುಕೃತ ಸಂಗಮA ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ದೇರಂಬಳ ಹೊಳೆಗೆ ಬಿದ್ದ ಯುವತಿಯನ್ನು ರಕ್ಷಿಸಿದ ಉದಯ ಕುಮಾರ ಶೆಟ್ಟಿ ದೇರಂಬಳ ಇವರ ಸಾಹಸ ಪ್ರವೃತ್ತಿಯನ್ನು ಮೆಚ್ಚಿ ಗೌರವಿಸಲಾಯಿತು. ಸೇವಾ ಭಾರತಿ ಮಂಗಲ್ಪಾಡಿಯ ಅಧ್ಯಕ್ಷ ರಘು ಸಿ. ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ, ಸಾಮಾಜಿಕ ಮುಂದಾಳು ವೀರಪ್ಪ ಅಂಬಾರು ಮಾತನಾಡಿದರು. ದೇರಂಬಳ ಹೊಳೆಯ ಸೇತುವೆಯನ್ನು ಶೀಘ್ರ ಪುನರ್ನಿರ್ಮಾಣ ಮಾಡಿ ಕೊಡಬೇಕೆಂದು ಸ್ಥಳೀಯಾಡಳಿತ ಸಮಿತಿಯನ್ನು ಒತ್ತಾಯಿಸಲಾಯಿತು. ಕಾರ್ಯದರ್ಶಿ ಮೋಹನ್ ದಾಸ್ ಐಲ ಸ್ವಾಗತಿಸಿದರು. ಹಿರಿಯರಾದ ಕೃಷ್ಣ ಪಿ. ಬಂದ್ಯೋಡು, ಸುಬ್ರಾಯ ಹೇರಳ, ಪ್ರೇಮï ಕುಮಾರ್ ಐಲ ಉಪಸ್ಥಿತರಿದ್ದರು.






