ಕಾಸರಗೋಡು: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಸಂಯುಕ್ತ ಮುಸ್ಲಿಂ ಜಮಾಯತ್ ಖಾಝಿಯಾಗಿದ್ದ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ (81) ನಿಧನ ಹೊಂದಿದರು. ಪೆರಿಂದಲ್‌ಮಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ 2 ಗಂಟೆಗೆ ನಿಧನ ಸಂಭವಿಸಿದೆ. ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. 2013ರಿಂದ ಕಾಸರಗೋಡು ಸಂಯುಕ್ತ ಖಾಝಿಯಾಗಿದ್ದರು.







