ನಿರಶನ ಕೊನೆಗೊಳಿಸಿದ ಸೋನಂ ವಾಂಕ್ಚುಕ್: ಪ್ರಶ್ನೆ ಪತ್ರಿಕೆಗಳ ಸೋರಿಕೆ ತಡೆಗೆ ಮಸೂದೆ ರೂಪು

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳು ದಾಗಿ ನಿನ್ನೆ ತಡರಾತ್ರಿ ಸುಮಾರು 3 ನಿಮಿಷಗಳ ಇನ್‌ಸ್ಟಾಗ್ರಾಂ ವೀಡಿಯೋ ಸಂದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ದಾರೆ.  ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಜಿರಳೆ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರತಿಭಟನೆ ಇನ್ನೂ  ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಮಹತ್ವದ ಘೋಷಣೆ ಹೊರಡಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿ ಯಾಗಿರುವವರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಲು ಹೊಸ ಮಸೂದೆ ಜ್ಯಾರಿ ಗೊಳಿಸಲಾಗುವುದು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದಾಕ್ಷಣ ಸರಕಾರ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ಪ್ರಕರಣದ ಆರೋಪಿ ಗಳನ್ನು ಈಗಾಗಲೇ ಬಂಧಿಸಿ ನಾವು ಜೈಲಿಗಟ್ಟಿದ್ದೇವೆ. 22 ಲಕ್ಷ ವಿದ್ಯಾರ್ಥಿ ಗಳಿಗೆ ತಕ್ಷಣ ಮರು ಪರೀಕ್ಷೆ ನಡೆಸಿ ಅದರ ಫಲಿತಾಂಶ ಘೋಷಿಸಿದ್ದೇವೆ. ಆರೋಪಿಗಳ ವಿಚಾರಣೆಗಾಗಿ ಕ್ಷಿಪ್ರ ನ್ಯಾಯಾಲಯಗಳು ಹಾಗೂ ಕಠಿಣ ಶಿಕ್ಷೆ ಖಾತರಿಪಡಿಸಲು  ಕರಡು ಮಸೂದೆ ಸಿದ್ಧಪಡಿಸುವಂತೆ ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಕರಡು ಮಸೂದೆಯನ್ನು ಅಂತಿಮಗೊಳಿಸಲು ಅಧಿಕಾರಿಗಳು ರಾತ್ರಿಯಿಡೀ ಶ್ರಮ ನಡೆಸಿದ್ದಾರೆ.  ಅದನ್ನು ಇಂದು ಕಂದ್ರ ಸಚಿವ ಸಂಪುಟ ದಲ್ಲಿ ಚರ್ಚಿಸಿದ ಬಳಿಕ ಆ ಮಸೂದೆ ಯನ್ನು ಸಂಸತ್‌ನ ಉಭಯ ಸದನ ಗಳಲ್ಲಿ  ಅಂಗೀಕರಿಸಲು ನಾವು ಪ್ರಯತ್ನಿ ಸುತ್ತೇವೆ ಎಂದೂ ವೀಡಿಯೋ ಸಂದೇಶ ದಲ್ಲಿ ಪ್ರಧಾನಿ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಕಳೆದ 26 ದಿನಗಳಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಲಡಾಕ್‌ನ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಕ್ಚುಕ್ ಇಂದು ಮುಂಜಾನೆ ಸತ್ಯಾಗ್ರಹ ಕೊನೆಗೊಳಿಸಿ ದ್ದಾರೆ. ನೀಟ್ ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಸ್ಪಂದಿಸಿರುವ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳುವುದೆಂಬ ಭರವಸೆ ನೀಡಿದ್ದು ಮಾತ್ರವಲ್ಲ ದೇಶದಲ್ಲಿ ಹಿಂಸಾ ಚಾರ ಸಂಭವಿಸುವ ಸಾಧ್ಯತೆಯನ್ನು ಪರಿಗಣಿಸಿ ನಾನು ಉಪವಾಸ ಅಂತ್ಯ ಗೊಳಿಸುವ ತೀರ್ಮಾನಕ್ಕೆ ಬಂದಿರುವು ದಾಗಿ ವಾಂಕ್ಚುಕ್ ಹೇಳಿದ್ದಾರೆ.

ಗುರುಗ್ರಾಮದ ವೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ವಾಂಕ್ಚುಕ್ ಕೇಂದ್ರ ಸಚಿವರುಗಳಾದ ಜೆ.ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್‌ರ ಸಮ್ಮುಖದಲ್ಲಿ ಉಪವಾಸ ಕೊನೆಗೊಳಿಸಿದರು.

You cannot copy contents of this page