ಹೃದಯಾಘಾತ ಶಾಲಾ ನೌಕರೆ ನಿಧನ

ಕಾಸರಗೋಡು: ಶಾಲೆಯ ನೌಕರೆಯಾದ ಯುವತಿ ಹೃದಯಾಘಾತದಿಂದ ಮೃತಪಟ್ಟರು. ವೆಳ್ಳಿಕ್ಕೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಆಫೀಸ್ ಅಸಿಸ್ಟೆಂಟ್, ಮಾಣಿಕೋತ್ ಶಾಲೆ ಸಮೀಪ ನಿವಾಸಿಯಾದ ಬಿಂದು (45) ಮೃತಪಟ್ಟವರು. ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಆಸ್ಪತ್ರೆಗೆ  ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇವರ ಪತಿ ಉತ್ತೇಶ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಪಾರ್ವಣೇಂದು, ದೇವನಂದನ್, ಸಹೋದರರಾದ ಜಯರಾಮನ್, ಯಶವಾನಂದನ್, ಕುಂದಿರಿಯಾಕ್ಷನ್, ಹಿತೇಶನ್, ಸಹೋದರಿಯರಾದ ಚಂದ್ರಾವತಿ, ಶ್ರೀಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page