ವ್ಯಾಪಾರಿಯ ತಲೆಗೆ  ಹೊಡೆದು ಹಣ ದರೋಡೆಗೆತ್ನಿಸಿದ ಆರೋಪಿ 22 ವರ್ಷಗಳ ಬಳಿಕ ಸೆರೆ

ಕಾಸರಗೋಡು: ಕಾಡುತ್ಪನ್ನ ವ್ಯಾಪಾರಿಯ ತಲೆಗೆ ಹೊಡೆದು ಹಣ ದರೋಡೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯನ್ನು 22 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಅಲವಿಲ್ ನಿವಾಸಿ ಎಚ್. ಮುನ್ನ ಯಾನೆ ಮುನೀರ್ (45) ಬಂಧಿತ ಆರೋಪಿ. ಹೊಸದುರ್ಗದ ಕಾಫಿಯಾ ಟ್ರೇಡರ್ಸ್ ಎಂಬ ಹೆಸರಿನ ಕಾಡುತ್ಪನ್ನ ಮಾರಾಟದಂಗಡಿಯ ಮಾಲಕ ಸಿ. ಅಬ್ದುಲ್ಲ ಹಾಜಿ ಎಂಬವರು 2004 ಜನವರಿ 9ರಂದು  ರಾತ್ರಿ ಅಂಗಡಿ ಮುಚ್ಚಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ದಾರಿ ಮಧ್ಯೆ ಹೊಸದುರ್ಗ ಪೇಟೆಯಲ್ಲಿ ಅಕ್ರಮಿಗಳ ತಂಡವೊಂದು ಅವರ ಮೇಲೆರಗಿ ತಲೆಗೆ ಹೊಡೆದು ೮೦ ಸಾವಿರ ರೂ. ಒಳಗೊಂಡಿದ್ದ ಬ್ಯಾಗ್ ಎಗರಿಸಲೆ ತ್ನಿಸಿತು. ಆಗ ಅಬ್ದುಲ್ಲ ಬೊಬ್ಬೆ ಹೊಡೆ ದಾಗ  ಜನರು ಅಲ್ಲಿಗೆ ಓಡಿ ಬರುವಷ್ಟ ರಲ್ಲಿ ಅಕ್ರಮಿಗಳು ಅಲ್ಲಿಂದ ಪರಾರಿಯಾ ಗಿದ್ದರು.

ಅದಕ್ಕೆ ಸಂಬಂಧಿಸ ಹೊಸದುರ್ಗ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ನಿವಾಸಿ ಆರ್.ಶರವಣನ್, ಪಳಯಂಗಾಡಿಯ ಥೋಮಸ್ ಸೆಬಾಸ್ಟಿನ್, ಹೊಸದುರ್ಗದ ಅಶ್ರಫ್, ಅಂಬಲತ್ತರದ ಪಿ.ಎಂ.ಮುನೀರ್ ಮಾತ್ರವಲ್ಲ ಕಣ್ಣೂರು ಅಲವಿಲ್ ನಿವಾಸಿ ಹಾಗೂ ಈಗ ಹೊಸದುರ್ಗ ಅದಿಞ್ಞಾಲ್‌ನಲ್ಲಿ ವಾಸಿಸುತ್ತಿರು ಸಿ.ಎಚ್. ಮುನ್ನ ಅಲಿಯಾಸ್ ಮುನೀರ್‌ನನ್ನು ಬಂಧಿಸಿದ್ದರು. ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಮುನೀರ್ ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾದ ಮುಂಬೈ ಸೇರಿದಂತೆ  ಹಲವೆಡೆಗಳಲ್ಲಾಗಿ ಕಳೆದ 22 ವರ್ಷಗಳಿಂದ ತಲೆಮರೆಸಿಕೊಂಡು ಜೀವಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಆತ ಈಗ ವಯನಾಡು ನಾಲಾಂಮೈಲ್‌ನಲ್ಲಿ ವಾಸಿಸತೊಡಗಿದ್ದು ಮಾನಂತವಾಡಿಯಲ್ಲಿ ವ್ಯಾಪಾರ ಸಂಸ್ಥೆಯೊಂದನ್ನು ಆರಂಭಿಸಿದನೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ವಯನಾಡಿನಿಂದ ಆತನನ್ನು  ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

You cannot copy contents of this page