ಅಡ್ಯನಡ್ಕ ಬ್ಯಾಂಕ್ ಕಳವು: ತನಿಖೆ ಕಾಸರಗೋಡಿಗೆ ವಿಸ್ತರಣೆ ಸಾಧ್ಯತೆ
ಅಡ್ಯನಡ್ಕ: ಕರ್ನಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಲ್ಲಿ ನಡೆದ ಭಾರೀ ಕಳವು ಪ್ರಕರಣದ ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಕುರಿತಾಗಿ ಯಾವುದೇ ಸುಳಿವು ಲಭಿಸಿಲ್ಲ. ಆದರೆ ಶೀಘ್ರದಲ್ಲೇ ಪ್ರಕರಣವನ್ನು ಭೇದಿಸಲು ಸಾಧ್ಯವಿದೆಯೆಂದೂ ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಕಲ್ಲಡ್ಕ-ಕಾಞಂಗಾಡ್ ಅಂತಾ ರಾಜ್ಯ ಹೆದ್ದಾರಿಯ ಅಡ್ಯನಡ್ಕದಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಮೊನ್ನೆ ರಾತ್ರಿ ಕಳವು ನಡೆದಿದೆ. ಬ್ಯಾಂಕ್‌ನ ಹಿಂಬಾಗಿಲ ಕಿಟಿಕಿಯ ಸರಳು ಮುರಿದು ಒಳನುಗ್ಗಿದ ಕಳ್ಳರು ಸೇಫ್ ಲಾಕರ್‌ನ ಬಾಗಿಲು ಕೊರೆದು ನಗ-ನಗದು ಕಳವು ನಡೆಸಿದ್ದಾರೆ. ಲಾಕರ್‌ನೊಳಗಿದ್ದ ೨ ಕಿಲೋ ಚಿನ್ನ ಹಾಗೂ ೧೭ ಲಕ್ಷ ರೂಪಾಯಿಗ ಳನ್ನು ಕಳ್ಳರು ದೋಚಿದ್ದಾರೆಂದು ತಿಳಿದು ಬಂದಿದೆ. ನಿನ್ನೆ ಬೆಳಿಗ್ಗೆ ಬ್ಯಾಂಕ್‌ನ ಸಿಬ್ಬಂದಿಗಳು ತಲುಪಿದಾಗಲೇ ಬ್ಯಾಂಕ್‌ಗೆ ಕಳ್ಳರು ನುಗ್ಗಿದ ವಿಷಯ ಅರಿವಿಗೆ ಬಂದಿತ್ತು. ಮಾಹಿತಿ ಲಭಿಸಿದ ವಿಟ್ಲ ಪೊಲೀಸರು ತಕ್ಷಣ ತಲುಪಿ ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್‌ನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ವಾಹನವೊಂದು ಬ್ಯಾಂಕ್‌ನ ಸಮೀಪಕ್ಕೆ ಮೊನ್ನೆ ರಾತ್ರಿ ತಲುಪಿರುವುದು ಕಂಡು ಬಂದಿದೆ. ಈ ವಾಹನ ಪೆರ್ಲ ಭಾಗ ದಿಂದ ತಲುಪಿ ರಬಹುದೆಂದು ಅಂದಾ ಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕಳವಿನಲ್ಲಿ ಅಂತಾರಾಜ್ಯ ಕಳ್ಳರು ಶಾಮೀ ಲಾಗಿ ರಬಹುದೆಂದು ಸಂಶಯಿಸಲಾಗು ತ್ತಿದ್ದು, ಇದರಿಂದ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸುವ ಸಾಧ್ಯತೆ ಇದೆಯೆಂದು ತಿಳಿದುಬಂ ದಿದೆ.
ವೃತ್ತಿಪರ ಕಳ್ಳರೇ ಈ ಕಳವು ನಡೆಸಿರಬಹುದೆಂದು ಅಂದಾಜಿಸಲಾ ಗಿದೆ. ಬ್ಯಾಂಕ್‌ನಲ್ಲಿ ಅಲರಾಂ ವ್ಯವಸ್ಥೆ ಏರ್ಪಡಿಸಲಾಗಿದೆ. ಲಾಕರ್ ಬಾಗಿಲು ತೆರೆಯುವ ವೇಳೆ ಅಲರಾಂ ಮೊಳಗ ಬೇಕಾಗಿತ್ತು. ಆದರೆ ಕಳ್ಳರು ಅದರ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ ಬಳಿಕವೇ ಕಳ್ಳತನ ನಡೆಸಿರಬಹುದೆಂದೂ ಖಚಿತಪಡಿಸಲಾಗಿದೆ. ಶ್ವಾನದಳ, ಬೆರಳಚ್ಚು ತಜ್ಞರು ಕೂಡಾ ನಿನ್ನೆ ಬ್ಯಾಂಕ್‌ಗೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಲಭಿ ಸಿದ ಸೂಚನೆಗಳ ಆಧಾರದಲ್ಲಿ ತನಿಖೆ ಮುಂದು ವರಿಯುತ್ತಿದೆಯೆಂದು ಹೇಳಲಾಗುತ್ತಿದೆ.