ಕಾಸರಗೋಡು: ಕಾರಡ್ಕ ನಿವಾಸಿ ಯುವತಿ ಆವರಣಗೋಡೆಯಿಲ್ಲದ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ಮಡಿಕೈ ಚಾಳಕಡವ್ ಆಯುರ್ವೇದ ಆಸ್ಪತ್ರೆ ಸಮೀಪದ ನಿವಾಸಿ ಆಟೋ ಚಾಲಕ ಸುರೇಂದ್ರರ ಪತ್ನಿ ಸರಳ (46) ಮೃತಪಟ್ಟ ಯುವತಿ. ನಿನ್ನೆ ಸಂಜೆ ಘಟನೆ ನಡೆದಿದೆ. ಬಾವಿಯ ಒಂದು ಭಾಗ ಕುಸಿದ ಸ್ಥಿತಿಯಲ್ಲಿದೆ. ತೋಟದ ಬಳಿ ಇರುವ ಬಾವಿಯ ಪರಿಸರ ದಲ್ಲಿ ಚಪ್ಪಲಿ ಕಂಡ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ಯುವತಿ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆಯ ತಪ್ಪಿ ಬಿದ್ದಿರಬೇ ಕೆಂದು ಶಂಕಿಸಲಾಗಿದೆ. ಅಗ್ನಿಶಾಮಕದಳ ಮತ್ತು ಪೊಲೀಸರು ತಲುಪಿ ಯುವತಿಯನ್ನು ಮೇಲೆತ್ತಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾ ದರೂ ಆ ವೇಳೆ ಮೃತಪಟ್ಟಿದ್ದರು. ಮೃತರು ತಂದೆ ವಿ.ಡಿ. ಕೊಟ್ಟ, ಪತಿ, ಪುತ್ರಿ ಆವಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







