ಕಣ್ಣೂರು: ಲಾರಿಯಲ್ಲಿ ಸಾಗಿಸುತ್ತಿದ್ದ 7 ಸಾವಿರ ಲೀಟರ್ ಸ್ಪಿರಿಟ್ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವನನ್ನು ಸೆರೆಹಿಡಿ ಯ ಲಾಗಿದೆ. ಅಡೂರ್ ನಿವಾಸಿ ಅಖಿಲ್ ಎಂಬಾತ ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಪೆರುಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಯ್ಯನ್ನೂರು ಅಬಕಾರಿ ರೇಂಜ್ ಇನ್ಸ್ಪೆಕ್ಟರ್ ವೈಶಾಖ್ರ ನೇತೃತ್ವದ ತಂಡ ನಡೆಸಿದ ಕಾರ್ಯಾ ಚರಣೆ ವೇಳೆ ಸ್ಪಿರಿಟ್ ಹೇರಿದ ಲಾರಿ ಆಗಮಿಸಿತ್ತು. ಮಂಗಳೂರಿನಿಂದ ಅಡೂರ್ನತ್ತ ತೆರಳುತ್ತಿದ್ದ ಲಾರಿಯನ್ನು ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ೨೦೦ ಕ್ಯಾನ್ಗಳಲ್ಲಾಗಿ ಸ್ಪಿರಿಟ್ ತುಂಬಿಸಿಟ್ಟಿ ರುವುದು ಪತ್ತೆಯಾಗಿದೆ. ಓಣಂ ಹಬ್ಬದ ವೇಳೆ ಮಾರಾಟಗೈ ಯ್ಯಲು ನಕಲಿ ಮದ್ಯ ತಯಾರಿಸುವ ಉದ್ದೇಶದಿಂದ ಈ ಸ್ಪಿರಿಟ್ ತರಲಾ ಗಿದೆಯೆಂದು ಅಂದಾಜಿಸಲಾಗಿದೆ. ಈ ಕುರಿತು ಇನ್ನಷ್ಟು ತನಿಖೆ ಮುಂದುವರಿಯುತ್ತಿದೆ.






