ಅರಣ್ಯದಲ್ಲಿ ಜೀರ್ಣಿಸಿದ ಸ್ಥಿತಿಯಲ್ಲಿ ಗಂಡಸಿನ ರುಂಡವಿಲ್ಲದ ಮೃತದೇಹ ಪತ್ತೆ

ಕಾಸರಗೋಡು: ಅರಣ್ಯದಲ್ಲಿ ಅಪರಿಚಿತ ಗಂಡಸಿನ ರುಂಡ ಬೇರ್ಪಟ್ಟ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ರಾಜಪುರಂಗೆ ಸಮೀಪದ ವಟ್ಟಕಯಂ ಎನ್‌ಎಸ್‌ಎಸ್ ಎಸ್ಟೇಟಿಗೆ ಸಮೀಪದ ಕರಿಂಕೋಲ್‌ನ ಅರಣ್ಯದಲ್ಲಿ ಮೃತದೇಹ ಪತ್ತೆಯಾಗಿದೆ. ಅಣಬೆ ಸಂಗ್ರಹಿಸಲೆಂದು ನಿನ್ನೆ ಈ ಕಾಡಿಗೆ ಹೋದವರು ಮೊದಲು ಈ ಮೃತದೇಹ ಕಂಡಿದ್ದು, ನಂತರ ಅವರು ನೀಡಿದ ಮಾಹಿತಿಯಂತೆ ರಾಜಪುರಂ ಪೊಲೀಸರು ಮತ್ತು ಪನತ್ತಡಿ ಸೆಕ್ಷನ್ ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಾತ್ರವಲ್ಲ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ ಅಗತ್ಯದ ಮಾಹಿತಿಗಳನ್ನು ಸಂಗ್ರಹಿಸಿದರು. ಒಂದು ತಿಂಗಳ ಹಿಂದೆ ಈ ಸಾವು ಸಂಭವಿಸಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮೃತದೇಹದ ತಲೆ ಶರೀರದಿಂದ ಪೂರ್ಣವಾಗಿ ಬೇರ್ಪಟ್ಟ ಸ್ಥಿತಿಯಲ್ಲಿ ತ್ತು. ಅಲ್ಲೇ ಪಕ್ಕ ಪ್ಲಾಸ್ಟಿಕ್ ಹಗ್ಗವೊಂದು ಪತ್ತೆಯಾಗಿದೆ. ಇದರಿಂದಾಗಿ ಈ ವ್ಯಕ್ತಿ ನೇಣು ಬಿಗಿದು ಸಾವನ್ನಪ್ಪಿರಬಹುದೆಂಬ ಪ್ರಾಥಮಿಕ ನಿಗಮನಕ್ಕೆ ಪೊಲೀಸರು ಬಂದಿದ್ದಾರೆ. ಸ್ಥಳದಲ್ಲಿ ಪೊಲೀಸರು ಶವ ಮಹಜರು ನಡೆಸಿದ ಬಳಿಕ ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜಿಗೆ ಸಾಗಿಸಿದರು. ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ಮೌಕೋಡು ನಿವಾಸಿಯೋರ್ವರು ಮೂರು ತಿಂಗಳ ಹಿಂದೆ ನಾಪತ್ತೆಯಾ ಗಿದ್ದರು. ಸತ್ತ ವ್ಯಕ್ತಿ ಅವರಾಗಿರಬಹುದೇ ಎಂಬ ಶಂಕೆಯನ್ನು  ಪೊಲೀಸರು ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page