ಶತಾಯುಷಿ ನಿಧನ

ಉಪ್ಪಳ :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯ ಕರ್ತರಾಗಿದ್ದ ಮಂಗಲ್ಪಾಡಿಯ ದಿ| ರಮಾನಾಥ ಶೆಣೈ ಅವರ ಪತ್ನಿ ಶತಾಯುಷಿ ಸೀತಾ ಭಾಯಿ (100) ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ರಾದರು. ಮೃತರು ಮಕ್ಕಳಾದ ಪ್ರಭಾಕರ ಶೆಣೈ, ರಾಜಾರಾಮ ಶೆಣೈ, ಸುದರ್ಶನ ಶೆಣೈ, ಶಿವರಾಯ ಶೆಣೈ, ಗುರುದಾಸ ಶೆಣೈ , ಭಾರತಿ ಶೆಣೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

You cannot copy contents of this page