ಯುವಕ ನೆರೆಮನೆಯ  ಬಾವಿಗೆ ಹಾರಿ ಆತ್ಮಹತ್ಯೆ

ಉಪ್ಪಳ: ಯುವಕನೋರ್ವ ನೆರೆಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಕೊಡ್ಲಮೊಗರು ಭಂಡಾರಮನೆಯ ಕಾಂತಪ್ಪ ಪೂಜಾರಿ ಎಂಬವರ ಪುತ್ರ ಕೆ.ನವೀನ್ (38) ಸಾವಿಗೆ ಶರಣಾದ ವ್ಯಕ್ತಿ.  ನಿನ್ನೆ ರಾತ್ರಿ ೭.೪೫ರ ವೇಳೆ ಇವರು ಬಾವಿಗೆ ಹಾರಿದ್ದಾರೆನ್ನ ಲಾಗಿದೆ.  ಈಬಗ್ಗೆ ಮನೆಯವರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಇದರಂತೆ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬಾವಿಯಿಂದ ನವೀನ್‌ರನ್ನು ಮೇಲಕ್ಕೆತ್ತಿದರೂ ಅವರ ಜೀವ ರಕ್ಷಿಸಲಾಗಲಿಲ್ಲ.  ನವೀನ್‌ರಿಗೆ ಅಸೌಖ್ಯ ಬಾಧಿಸಿತ್ತೆಂದೂ ಅದು ವಾಸಿಯಾಗದುದರಿಂದ ಮನನೊಂದು ಅವರು ಬಾವಿಗೆ ಹಾರಿರುವುದಾಗಿ ಸಂಶಯಿಸಲಾಗುತ್ತಿದೆಯೆಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ  ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಲಾಗಿದೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು  ದಾಖಲಿಸಿಕೊಂಡಿದ್ದಾರೆ. ಕೂಲಿ ಕಾರ್ಮಿಕನಾದ ನವೀನ್ ಅವಿವಾಹಿತರಾಗಿದ್ದಾರೆ.

ಮೃತರು ತಾಯಿ ಜಯಂತಿ, ಸಹೋದರ-ಸಹೋದರಿಯರಾದ ಪ್ರಕಾಶ್, ಭವ್ಯ, ಶಶಿಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page