ಪೆರುವೋಡಿಯಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ತಡೆ

ಬಾಯಾರು: ಭಾರೀ ಮಳೆಗೆ ಮುಳಿಗದ್ದೆ ಬಳ್ಳೂರು ರಸ್ತೆಯ ಪೆರ್ವೋಡಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಮುರಿದು ರಸ್ತೆಗೆ ಬಿದ್ದ ಘಟನೆ ನಿನ್ನೆ ಬೆಳಿಗ್ಗೆ ನಡೆದಿದೆ.
ಇದರಿಂದ ಅಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬಳಿಕ ಪಂಚಾಯತ್ ಸದಸ್ಯ ರಾಮಕೃಷ್ಣ ಬಲ್ಲಾಳ್, ಅಶೋಕ, ಗಣೇಶ, ಶಕೀರ್, ಹರಿಪ್ರಸಾದ್, ಶೀನ ತಲುಪಿ ಮರವನ್ನು ತೆರವುಗೊಳಿಸಿದರು. ಬಳಿಕ ವಾಹನ ಸಂಚಾರ ಆರಂಭಿಸಿತು.

RELATED NEWS

You cannot copy contents of this page