ಕಾಸರಗೋಡು: ಶ್ರೀ ಕೃಷ್ಣ ಜನ್ಮಾಷ್ಟಮಿ ಬಾಲದಿನಾಚರಣೆ ಸಮಿತಿ ಇದರ ಆಶ್ರಯದಲ್ಲಿ ಸೆಪ್ಟೆಂಬರ್ 4ರಂದು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ವೇಣುಗೋಪಾಲ್ ಕೆ.ಎನ್. ಕೊರಕೋಡು ಇವರು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಮಾಜಿ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ಜಗದೀಶ್ರಿಗೆ ನೀಡುವ ಮೂಲಕ ಉದ್ಘಾಟಿಸಿದರು.
ಕಾಸರಗೋಡು ಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ ಶೆಟ್ಟಿ ಕೌನ್ಸಿಲರ್ ಕೆ.ಎನ್. ರಾಮಕೃಷ್ಣ ಹೊಳ್ಳ, ವಿ.ಎಚ್.ಪಿ. ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಸಮಿತಿ ಕಾರ್ಯದರ್ಶಿ ರಾಜೇಂದ್ರ ಕುಂಟಾರು, ಗುಣಪಾಲ ಅಮೈ, ರವಿ ಕೇಸರಿ, ಕಮಲಾಕ್ಷ ಕೊರಕೋಡು, ರವಿ ಕೇಳುಗುಡ್ಡೆ, ಕಿಶೋರ್ ಕುಮಾರ್, ಉಪೇಂದ್ರ ಆಚಾರ್ಯ, ಅಶೋಕ ಬಟ್ಟಂಪಾರೆ, ಶ್ರೀವಳ್ಳಿ, ಪ್ರಶಾಂತಿ, ಸವಿತಾ, ಪ್ರೇಮಾ, ರಮ್ಯಾ, ಅದಿತಿ ಉಪಸ್ಥಿತರಿದ್ದರು.







