ಶ್ರೀಗಂಧ ಮರ ಕಡಿದು ಸಾಗಿಸಲೆತ್ನಿಸಿದ ವ್ಯಕ್ತಿ ಸೆರೆ

ಮುಳ್ಳೇರಿಯ: ಕಾರಡ್ಕ ಮೂಡಾಂಗುಳಂನ ಜನವಾಸವಿಲ್ಲದ ಹಿತ್ತಿಲಿನಿಂದ ಶ್ರೀಗಂಧ ಮರವನ್ನು ಕಡಿದು ಮಾರಾಟ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಗಂಟೆಗಳೊಳಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮುಳ್ಳೇರಿಯ  ನಿವಾಸಿ ಕೆ.ಎಂ. ಅಶೋಕ್ (56)ನನ್ನು ಕಾರಡ್ಕ ಸೆಕ್ಷನ್ ಆಫೀಸರ್ ಕೆ.ಎ. ಬಾಬು ಹಾಗೂ ತಂಡ ಬಂಧಿಸಿದೆ. ಈತನಿಂದ ಸವರಿ ಸಿದ್ಧಗೊಳಿಸಿದ್ದ ಎರಡು ಕಿಲೋ ಶ್ರೀಗಂಧ ಹಾಗೂ ತುಂಡರಿಸಲು ಉಪಯೋಗಿಸಿದ ಹ್ಯಾಕ್ಸೋ ಬ್ಲೇಡ್, ಕತ್ತಿಯನ್ನು ವಶಪಡಿಸಲಾಗಿದೆ.

ಶ್ರೀಗಂಧವನ್ನು ಮಾರಾಟ ಮಾಡಲೆಂದು ಕೊಂಡುಹೋಗಲು ಬಸ್ ನಿಲ್ದಾಣದಲ್ಲಿ ನಿಂತಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು ತಲುಪಿ ಈತನನ್ನು ಸೆರೆ ಹಿಡಿದಿದ್ದಾರೆ. ಗುರುವಾರ ಮುಂಜಾನೆ ಶ್ರೀಗಂಧ ಮರವನ್ನು ಮುರಿದು ತೆಗೆದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ಈ ಮೊದಲೂ ಕೂಡಾ ಶ್ರೀಗಂಧ ಪ್ರಕರಣ ದಾಖಲಾಗಿದ್ದು, ಜೈಲುವಾಸ ಅನುಭವಿಸಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

You cannot copy contents of this page