ಕಾಸರಗೋಡು: ವಿವಾಹ ವಿಚ್ಛೇಧನವನ್ನು ಹೈಕೋರ್ಟ್ನ ಮೂಲಕ ತ್ವರಿತಗೊಳಿಸಲಾಗುವುದು ಹಾಗೂ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪೂಜೆಗಳನ್ನು ನಡೆಸುವ ಭರವಸೆ ನೀಡಿ ಹಣ ಎಗರಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಸೈಬ ರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.
ಕೋಟ್ಟಯಂ ಅನಿಕ್ಕಾಟ್ ನಿವಾಸಿ ಆಂಟನಿ ವಿನ್ಸೆಂಟ್ (40) ಬಂಧಿತ ಆರೋಪಿ. ಕೊಲ್ಲಂ ತೇನ್ಮಲದಿಂದ ಈತನನ್ನು ಬಂಧಿಸಲಾಗಿದೆ.
ಉದುಮ ನಿವಾಸಿಯಾಗಿರುವ ಯುವತಿಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಗಂಡನಿಂದ ಬೇರ್ಪಟ್ಟು ಜೀವಿಸುತ್ತಿರುವ ಈ ಯುವತಿಯ ವಿವಾಹ ವಿಚ್ಛೇಧನ ಪ್ರಕರಣದ ತೀರ್ಪನ್ನು ಹೈಕೋರ್ಟ್ನಲ್ಲಿ ತ್ವರಿತಗೊಳಿಸುವಂತೆ ಮಾಡಲಾಗುವುದು ಹಾಗೂ ಜೀವನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮಾಡಲು ವಿಶೇಷ ಪೂಜೆ ಇತ್ಯಾದಿ ಕ್ರಮಗಳನ್ನು ನಡೆಸುವ ಹೆಸರಲ್ಲಿ ದೂರುಗಾರಳ ವಿವಿಧ ಬ್ಯಾಂಕ್ ಖಾತೆಗಳಿಂದ ಆರೋಪಿ ಹಲವು ಬಾರಿಯಾಗಿ ಒಟ್ಟು 13,16,731 ರೂ.ಲಪಟಾಯಿಸಿದ್ದನೆಂದು ಯುವತಿ ಕಾಸರಗೋಡು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 2025 ಸೆಪ್ಟಂಬರ್ 17ರಿಂದ 2026 ಜನವರಿ 2ರೊಳಗಿನ ಅವಧಿಯಲ್ಲಿ ಆರೋಪಿ ಯುವತಿ ಯಿಂದ ಈ ರೀತಿ ಹಣ ಲಪಟಾಯಿ ಸಿದ್ದನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಪತಿಯಿಂದ ಬೇರ್ಪಟ್ಟು ಜೀವಿಸುತ್ತಿರುವ ಈ ಯುವತಿಯನ್ನು ಆರೋಪಿ ಫೇಸ್ ಬುಕ್ ಮೂಲಕ ಮೊದಲು ಪರಿಚಯಗೊಂಡಿ ದ್ದನು. ನಂತರ ಫೋನ್ ಮತ್ತು ವಾಟ್ಸಪ್ ಮೂಲಕ ಯುವತಿಯನ್ನು ನಿರಂತರ ವಾಗಿ ಸಂಪರ್ಕಿಸಿ ಪರಿಚಯಗೊಂಡು ಸದುಪಯೋಗಪಡಿಸಿಕೊಂಡು ಆರೋಪಿ ಆಕೆಗೆ ಈ ರೀತಿ ವಂಚನೆ ನಡೆಸಿದ್ದನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಸೈಬರ್ ಕ್ರೈಮ್ ಪೊಲೀಸ್ ಇನ್ಸ್ಪೆಕ್ಟರ್ (ಉಸ್ತುವಾರಿ) ನಳಿನಾಕ್ಷನ್ ಪಿ ನೇತೃತ್ವದಲ್ಲಿ ಎಸ್ಐ ಸವ್ಯಸಾಚಿ, ಎಎಸ್ಐ ಗಳಾದ ರಂಜಿತ್ ಕುಮಾರ್ ಪಿ.ಕೆ, ದಿಲೀಪ್ ಎಂ, ಪ್ರಶಾಂತ, ಸಿವಿಲ್ ಪೊಲೀಸ್ ಆಫೀಸರ್ಗಳಾದ ಸವಾದ್ ಅಶ್ರಫ್ ಮತ್ತು ವಿಪಿನ್ ಎಂಬಿವರನ್ನೊ ಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಬಂಧಿತನನ್ನು ನಂತರ ನ್ಯಾಯಾಂಗ ಬಧನದಲ್ಲಿರಿಸಲಾಗಿದೆ.






