ಮಂಜೇಶ್ವರ: ಮೀನಿನಂಗಡಿ ಯಿಂದ ಮೀನು ಸಹಿತ ವಿವಿಧ ಸೊತ್ತುಗಳನ್ನು ಕಳವು ನಡೆಸಲಾಗಿದೆ. ತಲಪ್ಪಾಡಿಯಲ್ಲಿರುವ ಮೀನಿ ನಂಗಡಿಯಿಂದ ಮೀನುಗಳಿದ್ದ ಎರಡು ಫ್ರೀಸರ್, ಐದು ಫೈಬರ್ ಪೆಟ್ಟಿಗೆಗಳು, ಬಕೆಟ್ನಲ್ಲಿದ್ದ ೫ ಸಾವಿರ ರೂಪಾಯಿ ಹಾಗೂ ೪ ಚಾಕುಗಳನ್ನು ಕಳವು ನಡೆಸಲಾಗಿದೆ. ಇದರಿಂದ ಸುಮಾರು 1.40 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆಯೆಂದು ದೂರಲಾ ಗಿದೆ. ಮೀನಿನಂಗಡಿಯ ಪಾಲು ದಾರ ನಾದ ಬಂಗ್ರಮಂಜೇಶ್ವರ ಕಡಿಗಾರ್ ಹೌಸ್ನ ಮೊಹಮ್ಮದ್ ರಫೀಕ್ (34) ಎಂಬವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.
ಈ ತಿಂಗಳ 11ರಂದು ರಾತ್ರಿ 11 ಗಂಟೆಯಿಂದ 12ರಂದು ಬೆಳಿಗ್ಗೆ 10ಗಂಟೆ ಮಧ್ಯೆ ಅಂಗಡಿಯಿಂದ ಕಳವು ನಡೆದಿರುವು ದಾಗಿ ದೂರಿನಲ್ಲಿ ತಿಳಿಸಲಾಗಿದೆ.






