ಬೀರಂತಬೈಲಿನ ಶಿವರಾಮ ನಿಧನ

ಕಾಸರಗೋಡು: ಬೀರಂ ತಬೈಲು ನಿವಾಸಿ ಶಿವರಾಮ ಕೆ (88) ಎಂಬವರು  ನಿಧನ ಹೊಂದಿದರು. ನಿನ್ನೆ ರಾತ್ರಿ ಮನೆಯಲ್ಲಿ ಇವರಿಗೆ ದಿಢೀರ್ ಅಸೌಖ್ಯ ಕಾಣಿಸಿಕೊಂಡಿತ್ತು. ಕೂಡಲೇ  ನಗರದ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ ನಿಧನ ಸಂಭವಿಸಿದೆ.  ಇವರು ಈ ಹಿಂದೆ ನೆಲ್ಲಿಕುಂಜೆಯಲ್ಲಿದ್ದ ಎಚ್.ಎಂ.ಟಿ ಕಂಪೆನಿಯ ವಾಹನ ಚಾಲಕನಾಗಿ ಕೆಲಸ ನಿರ್ವಹಿಸಿ ದ್ದರು.  ಮೃತರು ಪತ್ನಿ ಪ್ರೇಮಾ ಭಾ, ಮಕ್ಕಳಾದ ಕಮಲಾಕ್ಷ, ಪುಷ್ಪವೇಣಿ, ಪ್ರದೀಪ್ ಕುಮಾರ್, ಕವಿತ, ಪ್ರಕಾಶ, ಅಳಿಯ-ಸೊಸೆಯಂದಿರಾದ ಶಿವಪ್ರಸಾದ್, ಸುಜಿತ್ ಕುಮಾರ್, ಪುಷ್ಪಾವತಿ, ಉಮಾ, ರೇಖಾ, ಅನಿತಾ ಹಾಗೂ ಅಪಾರ  ಬಂಧು ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಪುತ್ರ ಸುಧೀರ್ ಕುಮಾರ್ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page