ಎಂಡಿಎಂಎ ಪ್ರಕರಣ ಮಧ್ಯವರ್ತಿ ಉಪ್ಪಳ ನಿವಾಸಿ ಸೆರೆ

ಮಂಜೇಶ್ವರ: ಕಾರಿನಲ್ಲಿ ಬೆಂಗಳೂರಿಗೆ ಮಾದಕ ವಸ್ತುವಾದ 405 ಗ್ರಾಂ ಎಂಡಿ ಎಂಎ ಸಾಗಿಸಿದ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕಾರ್ಯವೆಸಗಿದ ಆರೋಪದಂತೆ ಉಪ್ಪಳ ನಿವಾಸಿಯನ್ನು ಪೆರಿಂದಲ್‌ಮಣ್ಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುಮೇಶ್ ಸುಧಾಕರನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಉಪ್ಪಳ ಮಣ್ಣಂಗುಳಿ ನಿಜಾಮ್ ಮಂಜಿಲ್‌ನ ಸಯ್ಯಿದ್ ಮುಹಮ್ಮದ್ ನವಾಜ್ (33) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದಿನಗಳ ಹಿಂದೆ ಕೆಲವರನ್ನು ಬಂಧಿಸಿದ್ದರು. ಈಗ ಬಂಧಿತನಾದವನ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ  ಮಾದಕದ್ರವ್ಯ ಪ್ರಕರಣ ಹಾಗೂ ಹಲ್ಲೆ ಪ್ರಕರಣಗಳಿವೆ. ಮಾತ್ರವಲ್ಲ ಕಾಪಾ ಕಾನೂನು ಪ್ರಕಾರವೂ ಆತನನ್ನು ಈ ಹಿಂದೆ ಬಂಧಿಸಿ  ಸೆರೆಮನೆವಾಸ ಅನುಭವಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page