ನೆಕ್ರಾಜೆ ಸಹಕಾರಿ ಬ್ಯಾಂಕ್ ನಿರ್ದೇಶಕಿ ಮೆಹಾರುನ್ನೀಸ ನಿಧನ

ನೆಕ್ರಾಜೆ: ನೆಕ್ರಾಜೆ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ಪೈಕ ನಿವಾಸಿ ಮೆಹಾರುನ್ನೀಸ (44) ನಿಧನ ಹೊಂದಿದರು. ಹೃದಯ ಸಂಬಂಧವಾದ ಅಸೌಖ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೈತ್ರಿ ಪೈಕ ಮಹಿಳಾ ವೇದಿಯ ಸಂಚಾಲಕಿಯಾಗಿಯೂ, ಸಾರ್ವಜನಿಕ ರಂಗದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ. ಮೃತರು ಪತಿ ಚೆಂಗಳ ಪಂಚಾಯತ್ ೭ನೇ ವಾರ್ಡ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಜೆ.ಪಿ. ಬಷೀರ್, ಮಕ್ಕಳಾದ ಮುಹಮ್ಮದ್ ಸಿನಾನ್ , ಅನಾನ್ ಅಬ್ಬಾಸ್, ಆಯಿಷ ಹಾದಿಯ, ಸಹೋದರರಾದ ನಾಸರ್, ನ್ಯಾಯವಾದಿ ಸಾಫೀರ್, ಹಬೀಬ್, ಡಾಕ್ಟರ್ ಅಸೀಸ್, ಸಹೋದರಿಯರಾದ ತಾಹಿರಾ, ಮಿಸ್ರಿಯಾ, ಆಮೀನ, ಅವ್ವಾಬಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page