ಕುಂಬ್ಡಾಜೆ: ಬೆಳಿಂಜ ಬಳಿಯ ಕುದಿಂಗಿಲ ಕಟ್ಟದಕೋರಿಕ್ಕಾರು ನಿವಾಸಿ ಸುಬ್ಬ ಮಣಿಯಾಣಿ (53) ನಿಧನಹೊಂದಿದರು. ಕಿಡ್ನಿ ಸಂಬಂಧ ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ನಿನ್ನೆ ರಾತ್ರಿ ಅಲ್ಲಿ ನಿಧನ ಸಂಭವಿಸಿದೆ. ಸುಬ್ಬ ಮಣಿಯಾಣಿ ಈ ಹಿಂದೆ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿದ್ದರು. ಅನಂತರ ಸ್ವಲ್ಪ ಕಾಲ ಬದಿಯಡ್ಕ ಪೇಟೆಯಲ್ಲಿ ಹೂವು ಮಾರಾಟ ನಡೆಸುತ್ತಿ ದ್ದರು. ಮೃತರು ಪತ್ನಿ ಸಾವಿತ್ರಿ, ಸಹೋದರ ಕೃಷ್ಣ ಮಣಿಯಾಣಿ, ಸಹೋದರಿಯರಾದ ಲೀಲಾವತಿ, ಗೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ನಾರಾಯಣ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.






