ಕುಂಬಳೆ: ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟು ಭಾರೀ ವಂಚನೆ ನಡೆದಿದೆ ಯೆಂಬ ಆರೋಪದಂತೆ ಕುಂಬಳೆ ಗ್ರಾಮ ಪಂಚಾ ಯತ್ಗೆ ವಿಜಿಲೆನ್ಸ್ ನಿನ್ನೆ ದಾಳಿ ನಡೆಸಿ ಕಡತಗಳನ್ನು ಪರಿಶೀಲಿ ಸಿದೆ. ಪರ್ಮಿಟ್ನಲ್ಲಿ ತಿಳಿಸಿ ರುವುದಕ್ಕಿಂತಲೂ ಹೆಚ್ಚು ವಿಸ್ತೀ ರ್ಣದಲ್ಲಿ ಕಟ್ಟಡ ನಿರ್ಮಾಣ ನಡೆಸಲಾಗಿದೆಯೆಂಬ ಆರೋಪ ಕೇಳಿಬಂದಿತ್ತು. 1200 ಚದರ ಅಡಿ ವಿಸ್ತೀರ್ಣವುಳ್ಳ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡದ ವಿಸ್ತೀರ್ಣವನ್ನು 653 ಚದರ ಅಡಿಯಾಗಿದೆಯೆಂದು ತಿಳಿಸಿ ಪಂಚಾಯತ್ಗೆ ಆದಾಯ ನಷ್ಟವುಂಟುಮಾಡಲಾಗಿದೆಯಂದು ದೂರು ಕೇಳಿಬಂದಿದೆ. ಇದರಂತೆ ನಿನ್ನೆ ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರೆಪ್ಶನ್ ಬ್ಯೂರೋ ಡಿವೈಎಸ್ಪಿ ಎ.ಕೆ. ವಿಶ್ವಂಭರನ್ ನಾಯರ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಪಂಚಾಯತ್ ವಿರುದ್ಧ ಕೇಳಿಬಂದ ಆ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆಯೂ ಪ್ರಾಥಮಿಕ ಪರಿಶೀಲನೆ ನಡೆಸಲಾಗಿತ್ತು. ಇದರ ಮುಂದುವರಿಕೆಯಾಗಿ ನಿನ್ನೆ ದಾಳಿ ನಡೆಸಲಾಗಿದೆ.






