ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕ ಶ್ರೀ ನಾರಾಯಣಗುರು- ಸತೀಶ್ಚಂದ್ರ ಭಂಡಾರಿ

ಕುಂಬಳೆ: ಸಮಾಜದಲ್ಲಿನ ಮೂಢನಂಬಿಕೆಗಳು ಮತ್ತು ಅನೈತಿಕತೆಗಳ ವಿರುದ್ಧ ಹೋರಾಡಿದ ಮಹಾನ್ ಸಮಾಜ ಸುಧಾರಕರಾಗಿದ್ದರು ಶ್ರೀ ನಾರಾಯಣಗುರು ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ ನುಡಿದರು. ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಆಯೋಜಿಸಿದ್ದ ಶ್ರೀ ನಾರಾಯಣಗುರು ಜಯಂತಿ ಆಚರಣೆ ಉದ್ಘಾಟನೆ ಸಂದರ್ಭ ಅವರು ಮಾತನಾಡುತ್ತಿದ್ದರು. ಕೇರಳದ ಶಿಲ್ಪಿ, ಶಿಕ್ಷಣ ಮತ್ತು ಸಂಘಟನೆಯ ಮೂಲಕ ಕೆಳವರ್ಗದವರನ್ನು ಸಬಲೀಕರಣಗೊಳಿಸಿ ಸಹೋದರತ್ವದ ಭಾವನೆಯನ್ನು ತುಂಬಲು ಅವರು ಪ್ರಯತ್ನಿಸಿರುವುದಾಗಿ ಅವರು ನುಡಿದರು.

ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಅಧ್ಯಕ್ಷತೆ ವಹಿಸಿದರು. ಕುಂಬಳೆ ಮಂಡಲ ಅಧ್ಯಕ್ಷ ಬಿ. ವಿಕ್ರಮ್ ಪೈ, ಜಿಲ್ಲಾ ಉಪಾಧ್ಯಕ್ಷ ಮುರಳೀಧರನ್ ಮಧೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಪುಣಿಯೂರು, ಸುಜಿತ್ ರೈ, ಶಿವಪ್ರಸಾದ್ ಶೆಟ್ಟಿ, ವಿನೋದನ್ ಕುಂಬಳೆ, ಅಜಿತ್ ಕುಮಾರ್, ರಮೇಶ್ ಭಟ್, ಕಾಂಚಾರ, ವಿವೇಕಾನಂದ, ರಾಜೇಶ್ ರೈ, ಶೋಭಾ, ವಿದ್ಯಾ ಪೈ ಸಹಿತ ಹಲವರು ಭಾಗವಹಿಸಿದರು.

ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಂಬಳೆ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ದಿನೇಶ್ ಚೆರುಗೋಳಿ ವಂದಿಸಿದರು.

You cannot copy contents of this page