ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು

ಕಾಸರಗೋಡು: ಸ್ನೇಹಿತರ ಜತೆಗೆ ಕೆರೆಯಲ್ಲಿ ಸ್ನಾನಕ್ಕಿಳಿದ ವಲಸೆಕಾರ್ಮಿಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೊಗ್ರಾಲ್ ಪುತ್ತೂರು ಬಳಿ ನಿನ್ನೆ ನಡೆದಿದೆ. ರಾಜಸ್ಥಾನ ಜೈಪುರ ಈದ್ರ ದಿಲ್ಲಿ ರಸ್ತೆ ಬಳಿಯ ಫರೀದ್ ಖಾನ್-ಝಹೀನಾ ದಂಪತಿ ಪುತ್ರ ಅಲ್ ರೆhದ್ ಫರ್ದೀನ್ ಖಾನ್ (23) ಸಾವನ್ನಪ್ಪಿದ ದುರ್ದೈವಿ.  ವಲಸೆ ಕಾರ್ಮಿಕನಾಗಿರುವ ಈ ಯುವಕ ಮೊಗ್ರಾಲ್ ಪುತ್ತೂರಿಗೆ ಸಮೀಪದ ಉಜ್ರೆಕೆರೆ ಬಳಿಯ ಫ್ಲಾಟ್ ಒಂದರಲ್ಲಿ ಇತರ ವಲಸೆ ಕಾರ್ಮಿಕರೊಂದಿಗೆ ವಾಸಿಸುತ್ತಿದ್ದು, ನಿನ್ನೆ ಸಂಜೆ ಅಲ್ಲೇ ಪಕ್ಕದ ಕೆರೆಗೆ ಸ್ನಾನಕ್ಕೆಂದು ಸ್ನೇಹಿತರ ಜತೆ ಹೋಗಿದ್ದು, ಆತ ನೀರಲ್ಲಿ ಮುಳುಗಿದ್ದನು. ವಿಷಯ ತಿಳಿದ ಕಾಸರಗೋಡು ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ  ಅಲ್ ಝೈದ್ ಫರ್ದೀನ್ ಖಾನ್‌ನನ್ನು ಕೆರೆಯಿಂದ ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮೃತನು ಹೆತ್ತವರ ಹೊರತಾಗಿ ಸಹೋದರ ಸಹೋದರಿಯರಾದ ಅಲ್‌ಫೈದ್, ಫರ್ದೀನಾ, ಅಮೇರಾನಾ, ನಾದಿಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page