ಕಾಸರಗೋಡು: ರಾತ್ರಿಯ ಮರೆಯಲ್ಲಿ ಪಾಯಿಖಾನೆಯ ತ್ಯಾಜ್ಯವನ್ನು ವಾಹನದಲ್ಲಿ ಹೇರಿಕೊಂಡು ತಂದು ಸಾರ್ವಜನಿಕ ತೋಡಿನಲ್ಲಿ ಉಪೇಕ್ಷಿಸಿದ ಘಟನೆ ನಡೆದಿದ್ದು, ಮಾಹಿತಿ ತಿಳಿದು ತಲುಪಿದ ಸ್ಥಳೀಯರ ನೇತೃತ್ವದಲ್ಲಿ ಈ ತ್ಯಾಜ್ಯವನ್ನು ಉಪೇಕ್ಷಿಸಿದ ವರಿಂದಲೇ ಸ್ವಚ್ಛಗೊಳಿಸಲಾಗಿದೆ. ಇತ್ತೀಚೆಗೆ ರಾತ್ರಿ ಹೊತ್ತಲ್ಲಿ ನಗರಸಭೆಯ ಅಣಂಗೂರು ಕಾಪಿವಳಪ್ ರಸ್ತೆ ಬದಿಯ ಸಣ್ಣ ತೋಡಿಗೆ ಪಾಯಿಖಾನೆ ತ್ಯಾಜ್ಯವನ್ನು ಉಪೇಕ್ಷಿಸಲಾಗಿತ್ತು.
ಪರಿಸರದಲ್ಲಿ ದುರ್ವಾಸನೆ ಹರಡಿದ ಹಿನ್ನೆಲೆಯಲ್ಲಿ ಹುಡುಕಾಡಿ ದಾಗ ತ್ಯಾಜ್ಯವನ್ನು ತೋಡಿನಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿತ್ತು. ಬಳಿಕ ಸ್ಥಳೀಯರ ನೇತೃತ್ವದಲ್ಲಿ ಇಲ್ಲಿನ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿ ತ್ಯಾಜ್ಯ ಉಪೇಕ್ಷಿಸಿದವರನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಇವರನ್ನು ಸ್ಥಳಕ್ಕೆ ಕರೆದೊಯ್ದು ತೋಡಿನಿಂದ ಈ ತ್ಯಾಜ್ಯವನ್ನು ಹಿಂದಕ್ಕೆ ತೆಗೆಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.






