ಕಾಸರಗೋಡು: ನಾಡಿನಾ ದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಯನ್ನು ವಿವಿಧ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಗುತ್ತಿದೆ. ಇದರಂಗವಾಗಿ ಕ್ಷೇತ್ರಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳು, ಬಾಲ ಗೋಕುಲಗಳ ನೇತೃತ್ವದಲ್ಲಿ ಕೃಷ್ಣವೇಷ ಸಹಿತ ವಿವಿಧ ಸ್ಪರ್ಧಾ ಕಾರ್ಯ ಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಧಾರ್ಮಿಕ ಸಭೆ, ಬಾಲಗೋ ಕುಲಗಳ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿರು ವುದು. ಬದಿಯಡ್ಕ ಸಹಿತ ಕೆಲ ವೆಡೆಗಳಲ್ಲಿ ಇಂದು ಬೆಳಿಗ್ಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಇದರಲ್ಲಿ ಹಲವಾರು ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ ಪಾಲ್ಗೊಂ ಡಿದ್ದು, ಈ ಮೂಲಕ ಉತ್ಸವಾ ಚರಣೆಗೆ ಹೆಚ್ಚಿನ ಮೆರುಗು ಮೂಡಿ ಬಂತು. ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾಡಿನಾದ್ಯಂತದಿಂದ ಭಾರೀ ಸಂಖ್ಯೆಯಲ್ಲಿ ಜನರು ತಲುಪಿದ್ದು ಇದರಿಂದ ಇಡೀ ನಾಡು ಮಥುರೆ ಯಂತೆ ಮಾರ್ಪಾಡುಗೊಂಡಿದೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ಕಾಸರಗೋಡು,ಬೋವಿಕ್ಕಾನ, ಕಾಞಂಗಾಡ್, ನೀಲೇಶ್ವರ, ಉದುಮ, ತೃಕರಿಪುರ, ಪಾಣತ್ತೂರು, ವೆಳ್ಳರಿಕುಂಡ್, ಮಾವಿಲಕಡಪ್ಪುರ, ತೈಕಡಪ್ಪುರ ಸಹಿತ ಹಲವು ಕಡೆಗಳಲ್ಲಿ ಬೃಹತ್ ಶೋಭಾಯಾತ್ರೆಗಳು ನಡೆಯುತ್ತಿದೆ. ಮುಳಿಯಾರು ಬಾಲಗೋಕುಲದ ಆಶ್ರಯದಲ್ಲಿ ಬೋವಿಕ್ಕಾನದಲ್ಲಿ ಇಂದು ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು, ಬಳಿಕ ನಾಲ್ಕು ಮಹಾ ಶೋಭಾಯಾತ್ರೆಗಳು ಬೋವಿಕ್ಕಾನ ಮಥುರಾ ನಗರಕ್ಕೆ ಆಗಮಿಸಲಿದೆ.






