ಕುಡಾಲುಮೇರ್ಕಳ: ಮುದೆಲ್ತಡ್ಕ ನಿವಾಸಿ ಉಮಾನಾಥ ಪೂಜಾರಿ (77) ಕರ್ನಾಟಕ ಕೊಲ್ಯದ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ಮಂಡೆಕಾಪು ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದು, ಸಿಪಿಎಂ ಮಂಡೆಕಾಪು ಬ್ರಾಂಚ್ ಸಮಿತಿ ಸದಸ್ಯನಾಗಿದ್ದರು. ಮೃತರು ಪತ್ನಿ ನಾಗಮ್ಮ, ಮಕ್ಕಳಾದ ಶ್ವೇತ, ಸ್ಮಿತ, ಗಣೇಶ್ ಪ್ರಸಾದ್, ಸಹೋದರ- ಸಹೋದರಿಯರು, ಅಳಿಯ, ಸೊಸೆ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.







