ಉಪ್ಪಳ: ಐಲ ಸಮುದ್ರ ತೀರದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಮುಳಿಂಜ ಮಹಾನಗರ ನಿವಾಸಿಯೂ, ದೈವ ಕಲಾವಿದರಾದ ತಿಮ್ಮಪ್ಪ (60) ಎಂಬವರಾಗಿದ್ದಾರೆಂದು ತಿಳಿದುಬಂದಿದೆ. ಕಳೆದ ಬುಧವಾರ ಸಂಜೆ ಇವರು ಐಲ ಸಮುದ್ರ ತೀರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕರಾವಳಿ ಪೊಲೀಸರು ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದ್ದರು.
ಬುಧವಾರ ಬೆಳಿಗ್ಗೆ ಉಪ್ಪಳಕ್ಕೆಂದು ತಿಳಿಸಿ ತಿಮ್ಮಪ್ಪ ಮನೆಯಿಂದ ತೆರಳಿದ್ದರೆನ್ನ ಲಾಗಿದ. ಅಂದು ಸಂಜೆಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಇದರಿಂದ ಮನೆಯವರು ವಿವಿಧೆಡೆ ಹುಡುಕಾಡಿ ದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲು ಮನೆಯವರು ತಲುಪಿದ್ದರು. ಈ ವೇಳೆ ಅಪರಿಚಿತ ಮೃತದೇಹ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು. ಇದರಂತೆ ಆಸ್ಪತ್ರೆಗೆ ತಲುಪಿ ಮನೆಯವರು ಪರಿಶೀಲಿಸಿದಾಗ ಮೃತ ದೇಹ ತಿಮ್ಮಪ್ಪರದ್ದೆಂದು ತಿಳಿದುಬಂದಿದೆ. ತಿಮ್ಮಪ್ಪ ಸಾಮಾನ್ಯವಾಗಿ ಐಲಸಮುದ್ರ ಕಿನಾರೆಗೆ ತೆರಳುತ್ತಿದ್ದರೆನ್ನಲಾಗಿದೆ. ಹೀಗೆ ಹೋದವರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆಯೆಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ದೈವ ಕಲಾವಿದರಾಗಿದ್ದ ತಿಮ್ಮಪ್ಪ ಅವರು ಧೂಮಾವತಿ, ಗುಳಿಗ, ಪಂಜುರ್ಲಿ ಸಹಿತ ವಿವಿಧ ದೈವಗಳನ್ನು ಕಟ್ಟುತ್ತಿದ್ದು ಇದರಿಂದ ನಾಡಿನಲ್ಲಿ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಕಲ್ಯಾಣಿ, ಮಕ್ಕಳಾದ ಅನಿತ, ಅನೀಶ್,ಚೈತ್ರ, ಪವಿತ್ರ, ಮನೋಜ್, ಅಳಿಯಂದಿ ರಾದ ಸತೀಶ ಅಳಕೆ, ಸತೀಶ ಕಡಬ, ಸಹೋದರಿ ಸುಂದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






