ಕಾಸರಗೋಡು: ಕೇರಳ ಪೊಲೀಸ್ ಇಲಾಖೆಯ ರಾಜ್ಯ ಮಟ್ಟದ ಅಥ್ಲೆಟಿಕ್ ಆಂಡ್ ಗೇಮ್ಸ್ ಮೀಟ್‌ನಂಗವಾಗಿ ‘ಕ್ರೀಡೆಗೆ ಎಸ್ ಎನ್ನಿ ಮಾದಕ ದ್ರವ್ಯಕ್ಕೆ ನೋ ಎನ್ನಿ’ ಎಂಬ ಸಂದೇಶದೊಂದಿಗೆ ತಿರುವನಂತಪುರ ತನಕದ ಕೇರಳ ಪೊಲೀಸ್ ಸ್ಪೋರ್ಟ್ಸ್ ಧೀವಟಿಕೆ ಯಾತ್ರೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಿಂದ ಇಂದು ಬೆಳಿಗ್ಗೆ ಪ್ರಯಾಣ ಆರಂಭಿಸಿತು. ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಇಂದು ಬೆಳಿಗ್ಗೆ ನಡೆದ ಪೊಲೀಸರು, ವಿದ್ಯಾರ್ಥಿಗಳು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ನೆರೆದ ಸಮಾರಂಭದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಧೀವಟಿಕೆ ಯಾತ್ರೆ ಪ್ರಯಾಣವನ್ನು ಫ್ಲಾಗ್ ಆಫ್ ಗೈಯ್ಯುವ ಮೂಲಕ ಉದ್ಘಾಟಿಸಿದರು. ಶಾಸಕರಾದ ಕಲ್ಲೆಟ್ರ ಮಾಹಿನ್, ಎಕೆಎಂ ಅಶ್ರಫ್, ಗೋವಿಂದನ್ ಪಳ್ಳಿಕಾಪಿಲ್, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್, ಜಿಲ್ಲಾ ಪೊಲೀಸ್ ಅಧಿಕಾರಿ ನಿತಿನ್‌ರಾಜ್ ಸೇರಿದಂತೆ ಹಲವರು ಭಾಗವಹಿಸಿ ಮಾತನಾಡಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮೆರಥಾನ್‌ಗೆ ಚಾಲನೆ ನೀಡಲಾಯಿತು. ನಂತರ ಇಂದು ಬೆಳಿಗ್ಗೆ ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಜಿಲ್ಲಾ ಪೊಲೀಸ್ ಕಚೇರಿಗಳ ನೇತೃತ್ವದಲ್ಲಿ ಮಾದಕದ್ರವ್ಯದ ವಿರುದ್ಧ ಕೂಡೆಯುಂಡು (ಜತೆಗಿದ್ದೇವೆ) ಎಂಬ ಕಾರ್ಯಕ್ರಮವೂ ನಡೆಯಿತು. ಇದರಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ, ಎಸ್‌ಪಿಸಿ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು. ಮಾತ್ರವಲ್ಲದೆ ಮಾದಕದ್ರವ್ಯ ವ್ಯಸನದ ವಿರುದ್ಧ ವಿಚಾರಗೋಷ್ಠಿಯನ್ನು ನಡೆಸಲಾಯಿತು. ಐಎಂಎ ತೂಫಾನ್ ತಂಡದ ಜಿಲ್ಲಾ ಸಂಚಾಲಕ ಡಾ| ಬಿ. ನಾರಾಯಣ ನಾಯ್ಕ, ಕಾಸರಗೋಡು ಚೈಲ್ಡ್ ವೆಲ್ಫೇರ್ ಸಮಿತಿ ಸದಸ್ಯ ಪುಷ್ಪಲತ ಸಿ, ಸಿಡಬ್ಲ್ಯು ಸಿಯ ಮಾಜಿ ಅಧ್ಯಕ್ಷ ಹಾಗೂ ಜೆಜೆಬಿ ಸದಸ್ಯರಾಗಿರುವ ಮಾಧುರಿ ಎಸ್ ಬೋಸ್ ಮತ್ತು ಜೆಸಿಐ ಇಂಟರ್ ನೇಶನಲ್ ಟ್ರೈನರ್ ವಿ. ವೇಣುಗೋಪಾಲ್ ಮಾತನಾಡಿದರು. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನಿತಿನ್‌ರಾಜ್ ಕಾರ್ಯಕ್ರಮದ ನೇತೃತ್ವ ವಹಿಸಿದರು.






