ಶಿರಿಯ, ಬಂಗ್ರಮಂಜೇಶ್ವರ ಕರಾವಳಿ ಯೋಜನೆಗಳ ಉದ್ಘಾಟನೆ ನಾಳೆ

ಮಂಜೇಶ್ವರ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ನವೀಕರಿಸುವ ಸಂಯೋಜಿತ ಆಧುನಿಕ ಕರಾವಳಿ ಮತ್ಸ್ಯ ಗ್ರಾಮ ಯೋಜನೆ ಅಂಗವಾಗಿ ಶಿರಿಯ, ಬಂಗ್ರಮಂಜೇಶ್ವರಗಳ ವಲಯಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನಾಳೆ ಸಂಜೆ 3 ಗಂಟೆಗೆ ಮಂಜೇಶ್ವರ ಹಾರ್ಬರ್ ಪರಿಸರದಲ್ಲಿ ನಡೆಯಲಿದೆ. ರಾಜ್ಯ ಸರಕಾರದ ನೂರು ದಿನ ಕ್ರಿಯಾ ಯೋಜನೆಯಲ್ಲಿ ಒಳಪಡಿಸಿ ನಡೆಸುವ ಕಾರ್ಯಕ್ರಮದಲ್ಲಿ ಮೊಬೈಲ್ ಫಿಶ್ ಲೆಂಡಿಂಗ್ ಕಿಯೋಸ್ಕ್‌ಗಳು, ಮೊಬೈಲ್ ಫಿಶ್, ಪ್ರೊಸೆಸಿಂಗ್ ಕಿಯೋಸ್ಕ್‌ಗಳ ವಿತರಣೆ ಹಾಗೂ ಒ.ಬಿ.ಎಂ. ದುರಸ್ತಿ ಕೇಂದ್ರದ ಚಟುವಟಿಕೆ ಉದ್ಘಾಟನೆಯನ್ನು ಹಾರ್ಬರ್ ಇಂಜಿನಿಯರಿಂಗ್, ಸಾಮಾಜಿಕ ನೀತಿ ಇಲಾಖೆ ಸಚಿವ ವಿ.ಇ. ಅಬ್ದುಲ್ ಗಫೂರ್ ಉದ್ಘಾಟಿಸುವರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಫಿಶರೀಸ್ ಇಲಾಖೆ ಸ್ಪೆಶಲ್ ಸೆಕ್ರಟರಿ ಬಿ.ಅಬ್ದುಲ್ ನಾಸರ್ ವರದಿ ಮಂಡಿಸುವರು. ಜಿ.ಪಂ. ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್, ಪಿ.ಐ. ಶೇಖ್ ಫರೀತ್, ಚೆಲ್ಸಾನಿನಿ ವಿ., ಸೈಪುಲ್ಲ ತಂಙಳ್ ಸಹಿತ ವಿವಿಧ ಜನಪ್ರತಿನಿಧಿಗಳು, ಯೂನಿಯನ್ ಪ್ರತಿನಿಧಿಗಳು ಭಾಗವಹಿಸುವರು.

ಕೇಂದ್ರ ಪಾಲಾದ 3.73 ಕೋಟಿ ರೂ, ರಾಜ್ಯದ ಪಾಲಾದ ೩.೩೧ ಕೋಟಿ ರೂ. ಸಹಿತ ಒಟ್ಟು 7.04 ಕೋಟಿ ರೂ. ವೆಚ್ಚದಲ್ಲಿ ಶಿರಿಯಾ, ಬಂಗ್ರಮಂಜೇಶ್ವರ ವಲಯಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ರಾಜ್ಯದ ಒಟ್ಟು 61.06 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸುವ ಆಯ್ದ ೯ ಮತ್ಸ್ಯ ಗ್ರಾಮಗಳಲ್ಲಿ ಶಿರಿಯವೂ ಒಂದಾಗಿದೆ.

You cannot copy contents of this page