ಎನ್‌ಟಿಯು ಮಂಜೇಶ್ವರ ಉಪಜಿಲ್ಲೆ ವತಿಯಿಂದ ಶಿಕ್ಷಕರ ದಿನಾಚರಣೆ

ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್ ಎನ್‌ಟಿಯು ಮಂಜೇಶ್ವರ ಉಪಜಿಲ್ಲಾ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಇಚ್ಲಂಗೋಡು ಎಎಲ್ಪಿಎಸ್ವ ಜನರಲ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಐ.ಕೆ. ವಾಸುದೇವ ಮಯ್ಯರನ್ನು ಅವರ ಸ್ವ-ಗೃಹದಲ್ಲಿ ಗೌರವಿಸಲಾ ಯಿತು. ಎನ್‌ಟಿಯು ರಾಜ್ಯ ಸಮಿತಿ ಸದಸ್ಯ ಅರವಿಂದಾಕ್ಷ ಭಂಡಾರಿ, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್, ದಿವಾಕರ ಆಳ್ವ, ಕೊರಗಪ್ಪ ಶೆಟ್ಟಿ, ಅಧ್ಯಾ ಪಕ ಕೃಷ್ಣಪ್ರಸಾದ್ ಶುಭ ಹಾರೈಸಿದರು. ಉಪಜಿಲ್ಲಾ ಸಮಿತಿ ಸದಸ್ಯ ಜಯರಾಮ ಸಿ ಎಚ್ ಸನ್ಮಾನಿತರ ಪರಿಚಯ ಮಾಡಿದರು. ಕಾರ್ಯದರ್ಶಿ ದೇವಿಪ್ರಸಾದ್ ಉಚ್ಚಿಲ್ ಸ್ವಾಗತಿಸಿ, ಕೋಶಾಧಿಕಾರಿ ರಘುವೀರ್ ರಾವ್ ವಂದಿಸಿದರು. ಮಂಜೇಶ್ವರ ಉಪಜಿಲ್ಲಾ ಸದಸ್ಯರಾದ ಕೃಷ್ಣ ಮೋಹನ್ ಹಾಗೂ ಧನುಷ್ ಉಪಸ್ಥಿತರಿದ್ದರು.

You cannot copy contents of this page