ಪೆರ್ಲ: ಮೂಲತಃ ಪೆರ್ಲ ಕಜಂಪಾಡಿ ನಿವಾಸಿ ಹಾಗೂ ಈಗ ಕಾಸರಗೋಡು ನುಳ್ಳಿಪಾಡಿಯಲ್ಲಿ ವಾಸಿಸುತ್ತಿದ್ದ ಭಾರತೀಯ ಅಂಚೆ ಇಲಾಖೆಯ ಪುಣೆಯ ನಿವೃತ್ತ ಸೀನಿಯರ್ ಸುಪರಿಂಟೆಂಡೆಂಟ್ (ಐಪಿಎಸ್) ಬಾಬು ನಾಯ್ಕ ಕೆ. (84) ನಿಧನ ಹೊಂದಿದರು. ಮೃತರು ಪತ್ನಿ ಕಾಸರಗೋಡು ಸರಕಾರಿ ಹೈಸ್ಕೂಲ್‌ನ ನಿವೃತ್ತ ಹಿಂದಿ ಅಧ್ಯಾಪಿಕೆ ಸುನಂದ ಭಾ, ಮಕ್ಕಳಾದ ವರ್ಕಾಡಿ ವಿದ್ಯುತ್ ಸೆಕ್ಷನ್ ಕಚೇರಿಯ ಸೀನಿಯರ್ ಸುಪರಿಂಟೆಂಡೆಂಟ್ ಶ್ರೀಮಾ ನಾಯ್ಕ್, ಎಸ್‌ಬಿಐಯ ಚೀಫ್ ಅಸೋಸಿಯೇಟ್ ರೂಪಾಶ್ರೀ ಬಿ, ಅಳಿಯಂದಿರಾದ ವಿಜಯ್ ಕುಮಾರ್ (ಮಂಗಳೂರು ವೆನ್ಲಾಕ್ ಆಸ್ಪತ್ರೆಯ ನಿವೃತ್ತ ವೈದ್ಯ), ಜನಾರ್ದನ ನಾಯ್ಕ್ ಸಿ.ಎಚ್ (ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯ), ಸಹೋದರ ಸಹೋದರಿಯರಾದ ಚಂದ್ರಶೇಖರ್, ಸದಾನಂದ, ಪದ್ಮಾವತಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







