4 ತಿಂಗಳ ಹಿಂದೆ ಅಭಿವೃದ್ಧಿಪಡಿಸಿದ ಲಾಲ್‌ಭಾಗ್- ಅಮ್ಮೇರಿ ರಸ್ತೆಗೆ ತೇಪೆ: ಸ್ಥಳೀಯರಿಂದ ತರಾಟೆ

ಪೈವಳಿಕೆ: ಲಾಲ್‌ಭಾಗ್-ಕುರುಡಪದವು ರಸ್ತೆಯ ಅಮ್ಮೇರಿ ತನಕ ಕಳೆದ ನಾಲ್ಕು ತಿಂಗಳ ಹಿಂದೆ ಅಭಿವೃದ್ದಿಗೊಳಿಸಿದ ರಸ್ತೆ ಒಂದೇ ಮಳೆಗೆ ಅಲ್ಲಲ್ಲಿ ಡಾಮರು ಎದ್ದÄ ಶೋಚನೀಯÁವಸ್ಥೆಗೆ ತಲುಪಿರುವುದು ಊರವರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಕಾಮಗಾರಿ ಆರಂಭದ ವೇಳೆಯೇ ಕಳಪೆ ಮಟ್ಟದಲ್ಲಿ ಡಾಮರೀ ಕರಣ ನಡೆಸಿರುವುದಾಗಿ ಆರೋಪಿಸಿ ಊರವರು ಪ್ರತಿಭಟನೆ ನಡೆಸಿದ್ದರು. ರಸ್ತೆಗೆ ಮರು ಡಾಮರೀಕರಣಗೊಳಿ ಸಲು ಬೇಡಿಕೆ ಇಟ್ಟಿದ್ದರು. ಈಗ ಶೋಚನೀಯÁವಸ್ಥೆಗೆ ತಲುಪಿದ ರಸ್ತೆಗೆ ಅಲ್ಲಲ್ಲಿ ತೇಪೆ ಹಾಕುವ ಕೆಲಸ ಆರಂಭಿಸಿದ್ದಾರೆ. ಆದರೆ ತೇಪೆ ಹಾಕದೆ ಮರು ಡಾಮರೀಕರಣಗೊಳಿಸಬೇಕೆಂದು ಆಗ್ರಹಿಸಿ ಗುತ್ತಿಗೆದಾರನನ್ನು ಊರವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮರು ಡಾಮರೀಕರಣ ಗೊಳಿಸದಿದ್ದರೆ ಹೋರಾಟಕ್ಕೆ ಮುಂದಾಗುವುದಾಗಿ ಊರವರು ತಿಳಿಸಿದ್ದಾರೆ.

RELATED NEWS

You cannot copy contents of this page