ಮೀಯಪದವು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ, ನಿವೃತ್ತ ಶಿಕ್ಷಣ ಅಧಿಕಾರಿ ಎಸ್.ವಿ. ಭಟ್‌ರ ಸಂಸ್ಮರಣ ಕಾರ್ಯಕ್ರಮ ಮತ್ತು ಕವಿಗೋಷ್ಠಿ ನಾಳೆ ಸಂಜೆ 3.46ಕ್ಕೆ ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯ ಸಭಾಂಗಣ ‘ಕೇಶವಾಮೃತಂ’ನಲ್ಲಿ ನಡೆಯಲಿದೆ. ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್ ಟಿ. ಸಂಸ್ಮರಣಾ ಭಾಷಣ ಮಾಡುವರು. ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕನ್ನಡ ಲೇಖಕ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ.ಎನ್. ಮೂಡಿತ್ತಾಯ ಮುಖ್ಯ ಅತಿಥಿಯಾಗಿರುವರು. ಹೈಯರ್ ಸೆಕೆಂಡರಿ ಪ್ರಾಂಶುಪಾಲ ರಮೇಶ್ ಕೆ.ಎನ್. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮೃದುಲ ಕೆ, ಕ.ಸಾ.ಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಪ್ರಾಧ್ಯಾಪಕ ರವಿಲೋಚನಾ ಸಿ.ಎಚ್, ಶಿಕ್ಷಕಿ ಸಾವಿತ್ರಿ ಎಂ, ಪ್ರಾಧ್ಯಾಪಕ ಹರೀಶ್ ಜಿ. ಉಪಸ್ಥಿತರಿರುವರು. ಬಳಿಕ ನಡೆಯುವ ಕವಿಗೋಷ್ಠಿಯಲ್ಲಿ ಹಲವರು ಕವಿತವಾಚನ ಮಾಡುವರು.





