ಉಪ್ಪಳ: ವಲಸೆ ಕಾರ್ಮಿಕನ ಪತ್ನಿ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಉತ್ತರಪ್ರದೇಶ ಖೇರಿ ಜಿಲ್ಲೆಯ ಶ್ರೀನಗರ ಮಜ್‌ಹರಿ ಗ್ರಾಂಟ್ ನಂ. 12ರ ನಿವಾಸಿ ಹಾಗೂ ಈಗ ಉಪ್ಪಳ ಮಣಿಮುಂಡದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಮನ್‌ಜಿತ್ ಸಿಂಗ್ ಎಂಬವರ ಪತ್ನಿ ಅಚಲ್ ಸಿಂಗ್ (25) ನಾಪತ್ತೆಯಾದ ಯುವತಿ. ಸೆಪ್ಟಂಬರ್ 8ರಂದು ಸಂಜೆ 4.30ರ ವೇಳೆ ಮಣಿಮುಂಡದಲ್ಲಿರುವ ಕ್ವಾರ್ಟರ್ಸ್‌ನಿಂದ ಹೊರ ಹೋದ ಅಚಲ್‌ಸಿಂಗ್ ನಾಪತ್ತೆಯಾಗಿ ರುವುದಾಗಿ ಆಕೆಯ ಪತಿ ಮನ್‌ಜಿತ್ ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






