ಯುವಕ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಯುವಕನೋರ್ವ  ಸರಕಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉಪ್ಪಳ ಕೋಡಿಬೈಲು ಎಸ್.ಸಿ ಉನ್ನತಿಯ ಮಂಜುನಾಥ (45) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಉನ್ನತಿಯಲ್ಲಿರುವ  ಪಂಚಾಯತ್ ಬಾವಿಯ ಸಮೀಪ ಚಪ್ಪಲಿ ಕಂಡುಬಂದಿತ್ತು. ಇದರಿಂದ ಸಂಶಯಗೊಂಡ ಸ್ಥಳೀಯರು  ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಪೊಲೀಸರು ಹಾಗೂ ಉಪ್ಪಳದಿಂದ ಅಗ್ನಿಶಾಮ ಕದಳ ತಲುಪಿ ಬಾವಿಯೊಳಗೆ ಶೋಧ ನಡೆಸಿದಾಗ ಮಂಜುನಾಥರ ಮೃತದೇಹ ಪತ್ತೆಯಾಗಿದೆ. ಇವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂ ಡಿರಬಹುದೇ ಎಂಬ ಸಂಶಯ ಹುಟ್ಟಿಕೊಂಡಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಣ್ಣಂಗುಳಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ದಿ| ವಾಸು ಎಂಬವರ ಪುತ್ರನಾದ ಮೃತರು ತಾಯಿ ಭಾಗಿ, ಪತ್ನಿ ಸರೋಜಿನಿ, ಪುತ್ರ ವೈಶಾಂತ್, ಸಹೋದರರಾದ ಉದಯ ಕುಮಾರ್, ಮನೋಜ್, ಸಹೋದರಿ ನೇತ್ರಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page