ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಯುವಕ, ಯುವತಿ ಬಂಧನ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಚಟ್ಟಂಚಾಲ್ ಎಯ್ಯಳದ ಮುಹಮ್ಮದ್ ಫೈಸಲ್ (34) ಹಾಗೂ ಪೊಯಿನಾಚಿಯ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುವ ತಸ್ಲಿಂ ಫರ್ಸಾನ (24) ಎಂಬಿವರನ್ನು ವಿದ್ಯಾನಗರ ಎಸ್‌ಐ ವಿಜಯನ್ ಮೇಲತ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.  ಆಪರೇಶನ್ ತೂಫಾನ್ ಅಂಗವಾಗಿ ಚೆರ್ಕಳದಲ್ಲಿ  ಪೊಲೀಸರು ನಿನ್ನೆ ವಾಹನ ತಪಾಸಣೆ ನಡೆಸುತ್ತಿದ್ದರು.  ಸಂಜೆ  ೪.೧೫ರ ವೇಳೆ ಚೆರ್ಕಳ ಮೇಲ್ಸೇತುವೆಗೆ ತಲುಪಿದಾಗ ಕಾಸರಗೋಡು ಭಾಗದಿಂದ ಚಟ್ಟಂಚಾಲ್ ಭಾಗಕ್ಕೆ ಕಾರು ಆಗಮಿಸಿದೆ. ಪೊಲೀಸರನ್ನು ಕಂಡೊಡನೆ ಕಾರು ಮರಳಿ ಅಪರಿಮಿತ ವೇಗದಲ್ಲಿ ಕಾಸರಗೋಡು ಭಾಗಕ್ಕೆ ಸಂಚರಿಸಿದೆ. ಇದರಿಂದ ಸಂಶಯಗೊಂಡ ಪೊಲೀಸರು  ಕಾರನ್ನು  ಹಿಂಬಾಲಿಸಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಯುವಕ, ಯುವತಿ ಹಾಗೂ  ಒಂದು ಮಗು ಇದ್ದರು. ಬಳಿಕ ಯುವಕನನ್ನು ತಪಾಸಣೆ ನಡೆಸಿದಾಗ ಪ್ಯಾಂಟ್‌ನ ಜೇಬಿನಲ್ಲಿ ಒಂದು ಗ್ರಾಂ ಎಂಡಿಎಂಎ ಪತ್ತೆಯಾಗಿದೆಯೆಂದು ವಿದ್ಯಾನಗರ ಪೊಲೀಸರು ದಾಖಲಿಸಿಕೊಂಡ  ಪ್ರಕರಣದಲ್ಲಿ ತಿಳಿಸಲಾಗಿದೆ. ಬಂಧಿತರಿಂದ ಮೂರು ಫೋನ್‌ಗಳು ಹಾಗೂ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ.

ಪೊಲೀಸ್ ತಂಡದಲ್ಲಿ ಎಸ್‌ಐ ಕೆ.ವಿ. ಜಗದೀಶನ್, ಎಎಸ್ ಐ ಪ್ರದೀಪ್ ಕುಮಾರ್,ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುಜೀಶ್, ಸಿವಿಲ್ ಪೊಲೀಸ್ ಆಫೀಸರ್ ಸಂಧ್ಯಾ, ಚಾಲಕ ಸುರೇಶ್‌ಬಾಬು ಎಂಬಿವರಿದ್ದರು.

You cannot copy contents of this page