ಕುಂಬಳೆ ದೇವಿನಗದಲ್ಲಿ ಹಾನಿಗೊಂಡ ಸರ್ವೀಸ್ ರಸ್ತೆ: ಅಪಘಾತ ನಿತ್ಯ ಘಟನೆ

ಕುಂಬಳೆ: ಇಲ್ಲಿನ ದೇವಿನಗರ ದಲ್ಲಿ ಸರ್ವೀಸ್ ರಸ್ತೆಗಳು ನಾಶಗೊಂ ಡಿವೆ. ಇದರಿಂದಾಗಿ ರಸ್ತೆ ಅಪಘಾತ ಗಳು ಹೆಚ್ಚುತ್ತಿವೆ. ಅವೈಜ್ಞಾನಿಕ ನಿರ್ಮಾಣವೇ ಹಾನಿಗೊಳ್ಳಲು ಕಾರಣವೆಂದು ಸ್ಥಳೀಯರು ಆರೋ ಪಿಸುತ್ತಾರೆ. ಒಂದು ವಾರದ ಹಿಂದೆ ದೇವಿನಗರದಲ್ಲಿ ಸರ್ವೀಸ್ ರಸ್ತೆಯ ಚರಂಡಿಯ ಮೇಲೆ ಹಾಸಿದ್ದ ಸ್ಲ್ಯಾಬ್ ಹಾನಿಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ತಿಳಿದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇಲ್ಲಿ ಪ್ಲಾಸ್ಟಿಕ್ ಬಾರಿಕೇಡ್ ಸ್ಥಾಪಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆಂದು ದೂರಲಾಗಿದೆ.

ಇದೇ ವೇಳೆ ಹಾನಿಗೊಂಡ ರಸ್ತೆಯ ದುರಸ್ತಿ ನಡೆಸುತ್ತಿಲ್ಲವೆಂಬ ಆರೋಪವೂ ಕೇಳಿ ಬರುತ್ತಿದೆ. ಬಾರಿಕೇಡ್ ಸ್ಥಾಪಿಸಿದ ಹಿನ್ನೆಲೆಯಲ್ಲಿ ವಾಹನಗಳು ಬೇಕಾಬಿಟ್ಟಿ ಅತ್ತಿತ್ತ ಸಂಚರಿಸುತ್ತಿವೆ ಎನ್ನಲಾಗಿದೆ. ಹೆಚ್ಚಿನ ದಿನಗಳಲ್ಲಿ ವಾಹನ ಅಪಘಾತಗಳು ಇಲ್ಲಿ ಸಂಭವಿಸುತ್ತಿವೆ. ನಿನ್ನೆಯೂ ಅಪಘಾತ ಸಂಭವಿಸಿದೆ. ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಇಲ್ಲಿ ಅಪಘಾತ ಉಂಟಾಗಿತ್ತು. ರಸ್ತೆ ದುರಸ್ತಿಗೊಳಿಸಲಿರುವ ಕೆಲಸ ಕೂಡಲೇ ಆರಂಭಿಸಬೇಕೆಂದು ವಾಹನ ಪ್ರಯಾಣಿಕರು, ಸ್ಥಳೀಯರು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

You cannot copy contents of this page