ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯ ಪರಿಚಾರಿಕೆಗೆ ಬಂದ ಪತ್ನಿಯ 52,000 ರೂ. ಒಳಗೊಂಡ ಪರ್ಸ್ ಕಳವು

ಕಾಸರಗೋಡು: ಚಿಕಿತ್ಸೆಗಾಗಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ಪತಿಯ ಪರಿಚಾ ರಿಕೆಗಾಗಿ ಬಂದಿದ್ದ ಪತ್ನಿಯ 52,000 ರೂ. ಒಳಗೊಂಡ ಪರ್ಸ್ ಕಳವುಗೈದ ಆರೋಪಿಯನ್ನು ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮೆಲ್ವಿನ್ ಜೋಸ್ ಮತ್ತು ಎಸ್‌ಐ ಮನು ನೇತೃತ್ವದ ಪೊಲೀಸರ ತಂಡ ಕಣ್ಣೂರಿ ನಿಂದ ಬಂಧಿಸಿದೆ. ಕಣ್ಣೂರು ಇರಿಟ್ಟಿ ಪಳ್ಳಂಜೇರಿಮುಖ್ ನಿವಾಸಿ ರಾಜೇಶ್ ಕುಮಾರ್ (30) ಬಂಧಿತ ವ್ಯಕ್ತಿ. 

ಮಾಯಿಪ್ಪಾಡಿ ತೈವಳಪ್ಪು ಹೌಸ್‌ನ ಎಂ. ಅಬ್ಬಾಸ್ ಎಂಬವರನ್ನು ಚಿಕಿತ್ಸೆಗಾಗಿ ಕಾಸರಗೋಡು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು.   ಈ ವೇಳೆ ಅವರ ಪರಿಚಾರಿಕೆಗಾಗಿ ಪತ್ನಿ ಆಸ್ಪತ್ರೆಗೆ ಬಂದಿದ್ದರು. ಈ ಮಧ್ಯೆ ಕಳೆದ ಅಗೋಸ್ತ್ 29ರಂದು ರಾತ್ರಿ 7.30 ಮತ್ತು ಮರುದಿನ ಬೆಳಿಗ್ಗೆ 8.20ರ ಮಧ್ಯೆ ಅಬ್ಬಾಸ್   ದಾಖಲಾಗಿದ್ದ ಕೊಠಡಿಗೆ ನುಗ್ಗಿ ಪತ್ನಿಯ ನಗದು ಒಳಗೊಂಡ ಪರ್ಸ್‌ನ್ನು ಕಳವುಗೈಯ್ಯಲಾಗಿತ್ತು.  ಆ ಬಗ್ಗೆ ಅಬ್ಬಾಸ್‌ರ ಮಗ ಅಬ್ದುಲ್ ಖಾದರ್ ನೀಡಿದ ದೂರಿಂತೆ ಕಾಸರಗೋಡು ಪೊಲೀಸರು ಆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣ ದಲ್ಲಿ ಆರೋಪಿ ರಾಜೇಶ್ ಕುಮಾರ್‌ನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯ ಸಿಸಿ ಟಿವಿ ದೃಶ್ಯಗಳಿಂದ ಆರೋಪಿಯ ಗುರುತು ಹಚ್ಚಲು ಸಾಧವಾಗಿತ್ತು. ಬಂಧಿತನು 20ರಷ್ಟು ಕಳವು ಪ್ರಕರಣದ ಆರೋಪಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page